HomeLatest NewsBIG NEWS : ರಾಜ್ಯದ ಆಸ್ತಿ ಮಾಲೀಕರೇ ಗಮನಿಸಿ : ಇ-ಖಾತೆ ಪಡೆದುಕೊಳ್ಳಲು ಜಸ್ಟ್ ಹೀಗೆ...

BIG NEWS : ರಾಜ್ಯದ ಆಸ್ತಿ ಮಾಲೀಕರೇ ಗಮನಿಸಿ : ಇ-ಖಾತೆ ಪಡೆದುಕೊಳ್ಳಲು ಜಸ್ಟ್ ಹೀಗೆ ಮಾಡಿ.!

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಆಸ್ತಿಯ ಇ-ಖಾತಾ, ಬಿ-ಖಾತಾ ಸೃಜಿಸುವುದು ಸರ್ಕಾರ ಕಡ್ಡಾಯಗೊಳಿಸಿದಂತೆ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತಿ ಆಸ್ತಿಯ ಮಾಲೀಕರುಗಳು ಆಸ್ತಿಯ ಮಾಲೀಕತ್ವದ ದಾಖಲೆಗಳನ್ನು ನಗರಸಭೆಗೆ ಸಲ್ಲಿಸಿ ಇ-ಖಾತಾ ಪಡೆದುಕೊಳ್ಳಲು ಪತ್ರಿಕಾ ಪ್ರಕಟಣೆ, ಆಟೋ ಪ್ರಚಾರ, ನಗರದ ಪ್ರಮುಖ ಸ್ಥಳಗಳಲ್ಲಿ ಇ-ಖಾತಾ, ಬಿ-ಖಾತಾ ಪಡೆಯುವ ಬಗ್ಗೆ ಮತ್ತು ಇ-ಖಾತಾ, ಬಿ-ಖಾತಾ ಪಡೆಯಲು ಸಲ್ಲಿಸಬೇಕಾದ ದಾಖಲೆಗಳ ವಿವರ ಇರುವ ಪ್ಲೇಕ್ಸ್ಗಳ ಅಳವಡಿಕೆ ಮತ್ತು ಸ್ಥಳೀಯ ಚಾನೆಲ್ಗಳಲ್ಲಿ ಸುದ್ದಿಯಾಗಿ ಪ್ರಚಾರ ಹಾಗೂ ನಗರಸಭೆ ಸಿಬ್ಬಂದಿಗಳು ಪ್ರತಿ ವಾರ್ಡ್, ಪ್ರತಿ ಮನೆಗೆ ಖುದ್ದಾಗಿ ಭೇಟಿ ನೀಡಿ ಇ-ಖಾತಾ ಮಾಡಿಸಿಕೊಳ್ಳದೆ ಇರುವವರಿಗೆ ದಾಖಲೆ ನೀಡಿ ಇ-ಖಾತಾ ಪಡೆಯಲು ತಿಳಿಸಿ ದಾಖಲೆ ನೀಡಿದವರಿಗೆ ಇ-ಖಾತಾ ಸೃಜಿಸಿ ನೀಡುವ ಕೆಲಸವನ್ನು ನಗರಸಭೆಯಿಂದ ಕೈಗೊಂಡಿದ್ದಾರೆ.

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಲ್ಲಿ ಇನ್ನೂ ಕೂಡ 3036 ಆಸ್ತಿಯ ಮಾಲೀಕರುಗಳು ಇ-ಖಾತಾ, ಬಿ-ಖಾತಾ ಪಡೆಯಲು ಅವಶ್ಯವಿರುವ ದಾಖಲೆಗಳನ್ನು ಆಸ್ತಿತೆರಿಗೆ ಪಾವತಿಯ ವಿವರದೊಂದಿಗೆ ನಗರಸಭೆಗೆ ಸಲ್ಲಿಸದೆ ಇರುವುದರಿಂದ ಶೇ.100 ರಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗದೇ ಇರುತ್ತದೆ.

ಇ-ಖಾತೆ ಪಡೆದುಕೊಳ್ಳಲು ಜಸ್ಟ್ ಹೀಗೆ ಮಾಡಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ವತ್ತಿನ ಮಾಲೀಕರುಗಳು, ಇ-ಖಾತಾ ಪಡೆಯದೆ ಇರುವವರು ಇ-ಖಾತಾ, ಬಿ-ಖಾತಾ ಪಡೆಯಲು ಸರ್ಕಾರ ಹೊಸದಾಗಿ ತಂತ್ರಾಂಶ ಚಾಲನೆಗೆ ತಂದಿದೆ. ಅದರಂತೆ ಇ-ಖಾತಾ ಪಡೆಯದ ಸ್ವತ್ತಿನ ಮಾಲೀಕರು eaasthi.karnataka.gov.in ವೆಬ್ಸೈಟ್ಗೆ ಹೋಗಿ ಸಿಟಿಜನ್ ಲಾಗಿನ್ನಲ್ಲಿ ತಮ್ಮ ಮೊಬೈಲ್ ನಂಬರ್ ಹಾಕಿ, ಇ-ಖಾತಾ, ಬಿ-ಖಾತಾ ಪಡೆಯಲು ಅವಶ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಮುಂದುವರಿಸಿದಲ್ಲಿ ನಗರಸಭೆಯಿಂದ ನಿಯಮನುಸಾರ ದಾಖಲೆ ಅನುಸಾರ ಇ-ಖಾತಾ, ಬಿ-ಖಾತಾ ಸೃಜಿಸಿ ನೀಡಲಾಗುವ ವ್ಯವಸ್ಥೆ ಜಾರಿಯಲ್ಲಿದ್ದು, ಈ ಕ್ರಮವನ್ನು ತಾವೆ ಕೈಗೊಳ್ಳಬಹುದಾಗಿದೆ.

ಇಲ್ಲದಿದ್ದಲ್ಲಿ ಇ-ಖಾತಾ, ಬಿ-ಖಾತಾಕ್ಕೆ ಅವಶ್ಯವಿರುವ ದಾಖಲೆಗಳನ್ನು ನಗರಸಭೆಗೆ ಸಲ್ಲಿಸಬೇಕು. ನಗರಸಭೆ ದಾಖಲೆ ಅಪ್ಲೋಡ್ ಮಾಡಿ ನಿಮ್ಮಿಂದ ಒಟಿಪಿ ಪಡೆದು ಮುಂದಿನ ಕ್ರಮವಹಿಸಿ ಇ-ಖಾತಾ ಸೃಜಿಸಿ ಕೊಡಲಾಗುವುದು.

ಸ್ವತ್ತಿನ ದಾಖಲೆ ತಂತ್ರಾಂಶದ ಮೂಲಕ ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳುವಿಕೆ, ಆಸ್ತಿ ತೆರಿಗೆ ಪಾವತಿಗೆ ಕಚೇರಿಗೆ ಬಾರದೇ ತಾವೇ ಲೆಕ್ಕಚಾರ ಮಾಡಿ ಪಾವತಿಸುವ ಸರಳ ವಿಧಾನ ಮಾಡಲು ಎಲ್ಲಾ ಆಸ್ತಿಗಳ ಇ-ಖಾತಾ ಮಾಡುವುದು ಕಡ್ಡಾಯವಾಗಿರುತ್ತದೆ. ಆದ್ದರಿಂದ ಇ-ಖಾತಾ ಪಡೆಯದೇ ಇರುವವರು ನಗರಸಭೆಯಿಮದ ಇ-ಖಾತಾಕ್ಕೆ ದಾಖಲೆ ಸಲ್ಲಿಸಿ ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಮಡಿಕೇರಿ ನಗರಸಭೆ ಪೌರಾಯುಕ್ತರಾದ ಎಚ್.ಆರ್.ರಮೇಶ್ ಅವರು ಕೋರಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular