HomeLatest Newsರಾಜ್ಯದ 'ಆಸ್ತಿ' ಮಾಲೀಕರೇ ಗಮನಿಸಿ : ಇಂದಿನಿಂದ ಡಿ.3 ರವರೆಗೆ ಇ- ಆಸ್ತಿ ಆಂದೋಲನ

ರಾಜ್ಯದ ‘ಆಸ್ತಿ’ ಮಾಲೀಕರೇ ಗಮನಿಸಿ : ಇಂದಿನಿಂದ ಡಿ.3 ರವರೆಗೆ ಇ- ಆಸ್ತಿ ಆಂದೋಲನ

ಶಿವಮೊಗ್ಗ : ಸರ್ಕಾರದ ಆದೇಶದಂತೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ 35 ವಾರ್ಡ್ಗಳಲ್ಲಿ ಇ-ಆಸ್ತಿಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು ನ.11 ರಿಂದ ಡಿ.03 ರವರೆಗೆ ವಿವಿಧ ವಾರ್ಡುಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಮಹಾನಗರಪಾಲಿಕೆ ಆಯುಕ್ತರು ಕೋರಿದ್ದಾರೆ.

ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಇ-ಆಸ್ತಿ(ಇ-ಖಾತಾ) ಪಡೆಯುವುದು ಕಡ್ಡಾಯವಾಗಿದ್ದು ಆಸ್ತಿ ಮಾಲೀಕರು ಕರ್ನಾಟಕ ಒನ್/ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಪಾಲಿಕೆಯ 3 ವಲಯ ಕಚೇರಿಗಳಲ್ಲಿ ಖುದ್ದಾಗಿ ಅರ್ಜಿ ಸಲ್ಲಿಸಬಹುದು, ಪಾಲಿಕೆ ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿದಾಗ ಸೂಕ್ತ ದಾಖಲೆಗಳನ್ನು ಒದಗಿಸಿ ಪಡೆಯಬಹುದು, ವಾರ್ಡ್ವಾರು ‘ಇ-ಖಾತಾ ಮೇಳ’ ದಲ್ಲಿ ಅರ್ಜಿ ಸಲ್ಲಿಸಬಹುದು ಹಾಗೂ Citizen Portal Link : https//eaasthi.karnataka.gov.in ಇಲ್ಲಿ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.

ಕಂದಾಯ ವಾರ್ಡ್ ಸಂಖ್ಯೆ 35 ಗಾಡಿಕೊಪ್ಪ ದಿ: 11-11-2025 ಅಗಮುಡಿ ಸಮಾಜ ಸೇವಾ ಸಂಘ, ಆಲ್ಕೋಳ ವೃತ್ತ. ವಾರ್ಡ್ ಸಂಖ್ಯೆ 34 ವಿನೋಬನಗರ ದಿ: 13-11-2025 ಆಟೋ ಕಾಂಪ್ಲೆಕ್ಸ್, ಪ್ಲಾಟ್ ನಂ 61, ಶ್ರೀ ಮಲ್ಲಿಕಾರ್ಜುನ ಆಗ್ರೋ, 1ನೇ ಮುಖ್ಯರಸ್ತೆ ಶಿವಮೊಗ್ಗ. ವಾರ್ಡ್ ಸಂಖ್ಯೆ 12 ಗುಡ್ಡೇಕಲ್ ದಿ: 13-11-2025 ಯೋಗಭವನ, 4ನೇ ತಿರುವು ಸಿದ್ದೇಶ್ವರ ನಗರ. ವಾರ್ಡ್ ಸಂಖ್ಯೆ 01 ಸಹ್ಯಾದ್ರಿ ನಗರ ದಿ: 15-11-2025 ತಮಿಳ್ ತಾಯಿ ಸಮುದಾಯ ಭವನ, ಜೆ ಹೆಚ್ ಪಟೇಲ್ ಲೇಔಟ್ ಸೋಮಿನಕೊಪ್ಪ ರಸ್ತೆ. ವಾರ್ಡ್ ಸಂಖ್ಯೆ 08 ಶಾಂತಿನಗರ ದಿ: 19-11-2025 ಗಣಪತಿ ದೇವಸ್ಥಾನ ಮುಂಭಾಗ, 2ನೇ ಮುಖ್ಯರಸ್ತೆ, ರಾಜಾಕಾಲುವೆ ಪಕ್ಕ ಕೃಷಿನಗರ. ವಾರ್ಡ್ ಸಂಖ್ಯೆ 31 ಹೊಸಮನೆ ದಿ: 19-11-2025 ಸಾರ್ವಜನಿಕ ಗ್ರಂಥಾಲಯ ಶರಾವತಿ ನಗರ. ವಾರ್ಡ್ ಸಂಖ್ಯೆ 16 ಊರುಗಡೂರು ದಿ: 24-11-2025 ಅಶ್ವಥ್ ಕಲಾ ವೇದಿಕೆ, ಪಾರ್ಕ್ ಆವರಣ, ಗಣಪತಿ ದೇವಸ್ಥಾನದ ಹತ್ತಿರ, ನಂಜಪ್ಪ ಲೇಔಟ್, ಬೈಪಾಸ್ ರಸ್ತೆ, ವಾರ್ಡ್ ಸಂಖ್ಯೆ 26 ಗೋಪಾಳ ದಿ: 26-11-2025 ದ್ರೌಪದಮ್ಮ ದೇವಸ್ಥಾನ ಸಭಾಭವನ ಗೋಪಾಳ. ವಾರ್ಡ್ ಸಂಖ್ಯೆ 27 ಮಿಳಘಟ್ಟ ದಿ: 03-12-2025 ಭಾರತೀಯ ಸಭಾ ಭವನ ಮುಖ್ಯರಸ್ತೆ ಆರ್ಎಂಎಲ್ ನಗರ ಇಲ್ಲಿ ಬೆಳಿಗ್ಗೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

10 ರಿಂದ ಸಂಜೆ 4 ಗಂಟೆವರೆಗೆ ಅರ್ಜಿ ಸ್ವೀಕರಿಸಲಾಗುವುದು. ಆಸ್ತಿ ಮಾಲೀಕರು, ಅರ್ಜಿ ಸಲ್ಲಿಸುವಾಗ ಮಾಲೀಕತ್ವ ಸಾಬೀತುಪಡಿಸುವ ದಾಖಲೆ, ಮಾಲೀಕರ ಭಾವಚಿತ್ರ ಮತ್ತು ಮಾಲೀಕರ ಗುರುತಿನ ಚೀಟಿ(ವೋಟರ್ ಐಡಿ/ಪ್ಯಾನ್ ಕಾರ್ಡ್/ರೇಷನ್ ಕಾರ್ಡ್/ಡ್ರೆöÊವಿಂಗ್ ಲೈಸೆನ್ಸ್/ಪಾಸ್ಪೋಟ), ಕಟ್ಟಡದ/ನಿವೇಶನದ ಭಾವಚಿತ್ರ, ಕಟ್ಟಡ ಪರವಾನಗಿ ಪ್ರತಿ(ಇದ್ದಲ್ಲಿ), ವಿದ್ಯುತ್ ಬಿಲ್, ಇತೀಚಿನ ವರ್ಷದ ಕಂದಾಯ ಪಾವತಿ ರಶೀದಿಯನ್ನು ಸಲ್ಲಿಸಬೇಕು. ಎಂದು ಮಹಾನಗರಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular