HomeLatest NewsBIG NEWS : 'ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : ತುರ್ತಾಗಿ ಈ ಕೆಲಸ ಮಾಡುವಂತೆ...

BIG NEWS : ‘ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ : ತುರ್ತಾಗಿ ಈ ಕೆಲಸ ಮಾಡುವಂತೆ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ಮಾತೃ ಇಲಾಖೆಯಿಂದ ಅನ್ಯ ಸೇವೆ/ನಿಯೋಜನೆಯ ಮೇಲೆ ನಿಗಮ ಮಂಡಳಿ ಸ್ವಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರು NTT DDO Code ಆಧಾರದ ಮೇಲೆ ವಿಮಾ ಇಲಾಖೆಯ ಸೇವೆಗಳನ್ನು ಪಡೆಯಲು ಹೆಚ್.ಆರ್ ಎಂ.ಎಸ್ ನಲ್ಲಿ ಸೇವಾ ವಿವರಗಳ ಪ್ರಾಥಮಿಕ ಮಾಹಿತಿಯನ್ನು ಇಂದಿಕರಿಸುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮೆಯ ಎಲ್ಲಾ ಸೇವೆಗಳನ್ನು ಪ್ರಸ್ತುತ ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದೆ. ಈ ಆನ್ಲೈನ್ ಸೇವೆಗಳನ್ನು ಪಡೆಯಲು ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರು ಅರ್ಜಿಗಳನ್ನು ವೇತನ ಬಟವಾಡೆ ಅಧಿಕಾರಿಗಳು/ಮೇಲಧಿಕಾರಿಗಳ ಮುಖಾಂತರ ವಿಮಾ ಇಲಾಖೆಗೆ ಸಲ್ಲಿಸಬೇಕಿರುತ್ತದೆ. ಮಾತೃ ಇಲಾಖೆಯಿಂದ ಅನ್ಯ ಸೇವೆ/ನಿಯೋಜನೆಯ ಮೇಲೆ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರ ವೇತನ ಬಟವಾಡೆ ಅಧಿಕಾರಿಗಳಿಗೆ ಖಜಾನೆ DDO Code ಇಲ್ಲದಿರುವುದರಿಂದ ಇಂತಹ DDO ಗಳಿಗೆ ಈವರೆಗೆ ವಿಮಾ ಇಲಾಖೆಯಲ್ಲಿ DDO Login ಸೃಜಿಸಲು ಸಾಧ್ಯವಾಗಿರುವುದಿಲ್ಲ. ಇದರಿಂದಾಗಿ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿ/ನೌಕರರು ವಿಮಾ ಇಲಾಖೆಯ ಆನ್ಲೈನ್ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ.

ಈ ಹಿನ್ನೆಲೆಯಲ್ಲಿ, ಉಲ್ಲೇಖ(1) ರ ಸರ್ಕಾರದ ಆದೇಶದಲ್ಲಿ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರಿಗೆ NTT DDO CODE (NON TREASURY TRANSACTION DDO CODE) ಆಧಾರದ ಮೇಲೆ ವಿಮಾ ಇಲಾಖೆಯ ಆನ್ಲೈನ್ ಸೇವೆಗಳನ್ನು ಒದಗಿಸಲು ಅನುಮತಿಯನ್ನು ನೀಡಿ ಆದೇಶಿಸಲಾಗಿರುತ್ತದೆ.ಪ್ರಸ್ತುತ ವಿಮಾ ಇಲಾಖೆಯಲ್ಲಿ HRMSನಲ್ಲಿ ಲಭ್ಯವಿರುವ ರಾಜ್ಯ ಸರ್ಕಾರಿ ನೌಕರರ ಪ್ರಾಥಮಿಕ ವಿವರಗಳ ದತ್ತಾಂಶವನ್ನು ವಿಮಾ ಇಲಾಖೆಗೆ ಪಡೆದು ಅದರ ಆಧಾರದ ಮೇಲೆ ವಿಮಾದಾರರ ದತ್ತಾಂಶವನ್ನು ಮಾನ್ಯ ಮಾಡುತ್ತಿರುವುದರಿಂದ ಹಾಗೂ ಪ್ರಸ್ತುತ HRMS-KGID ದತ್ತಾಂಶಗಳ ಅನುಕಲನ ತಂತ್ರಾಂಶವು ಅಭಿವೃದ್ಧಿಯಾಗುತ್ತಿರುವುದರಿಂದ ರಾಜ್ಯ ಸರ್ಕಾರಿ ನೌಕರರ ದತ್ತಾಂಶವು HRMS ಮತ್ತು KGID ತಂತ್ರಾಂಶಗಳಲ್ಲಿ ಏಕರೂಪವಾಗಿರಬೇಕು. ಇದರಿಂದಾಗಿ ವಿಮಾ ಇಲಾಖೆಯ ಆನ್ಲೈನ್ ಸೇವೆಗಳನ್ನು NTT DDO CODE ಅಧಾರದ ಮೇಲೆ ಒದಗಿಸಲು HRMS ನಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳು/ನೌಕರರ ಪ್ರಾಥಮಿಕ ವಿವರಗಳು ಇರುವುದು ಕಡ್ಡಾಯವಾಗಿರುತ್ತದೆ. ಆದುದರಿಂದ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರ ಸೇವಾ ವಿವರಗಳು HRMS ನಲ್ಲಿ ಇಲ್ಲವಾದಲ್ಲಿ ಅವರ ಮಾತೃ ಇಲಾಖೆಯಲ್ಲಿನ HRMS ನೋಡಲ್ ಅಧಿಕಾರಿಯ ಮುಖಾಂತರ HRMS ನಲ್ಲಿ ಅವರ Service Register ಅನ್ನು ಸೃಜಿಸಬೇಕಿರುತ್ತದೆ ಹಾಗೂ ವೈಯಕ್ತಿಕ ವಿವರಗಳು(ಹೆಸರು, ತಂದೆಯ ಹೆಸರು, ಜನ್ಮ ದಿನಾಂಕ, ಲಿಂಗ, ಪಾನ್ ಸಂಖ್ಯೆ, ಸರ್ಕಾರಿ ಸೇವೆಗೆ ಸೇರಿದ ದಿನಾಂಕ, ಪ್ರಥಮ ವಿಮಾ ಪಾಲಿಸಿ ಸಂಖ್ಯೆ,ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿ ಇತ್ಯಾದಿ) ಅಪೂರ್ಣವಿದ್ದಲ್ಲಿ ಸಂಪೂರ್ಣವಾದ ಮಾಹಿತಿಯೊಂದಿಗೆ HRMS ನಲ್ಲಿ ಇಂದೀಕರಿಸುವುದು ಅಗತ್ಯವಾಗಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇಲ್ಕಂಡ ಸಮಸ್ಯೆಯನ್ನು ನಿವಾರಿಸಲು ಉಲ್ಲೇಖ(2)ರ ಪತ್ರದಲ್ಲಿ ವಿಮಾ ನಿರ್ದೇಶಕರು ಸಲ್ಲಿಸಿರುವ ಕೋರಿಕೆಯನ್ನು ಪರಿಶೀಲಿಸಿ, ಅನ್ಯ ಸೇವೆ/ನಿಯೋಜನೆ ಮೇಲೆ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರು NTT DDO CODE ಆಧಾರದ ಮೇಲೆ ವಿಮಾ ಇಲಾಖೆಯ ಆನ್ಲೈನ್ ಸೇವೆಗಳನ್ನು ಪಡೆಯುವುದನ್ನು ಸಾಧ್ಯಗೊಳಿಸಲು ಅನುವಾಗುವಂತೆ ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, NTT DDO CODE ಆಧಾರದ ಮೇಲೆ ವಿಮಾ ಇಲಾಖೆಯ ಆನ್ಲೈನ್ ಸೇವೆಗಳನ್ನು ಪಡೆಯಲು ಅನುವಾಗುವಂತೆ ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಅನ್ಯ ಸೇವೆ/ನಿಯೋಜನೆ ಮೇರೆಗೆ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರು ಅವರ ಮಾತೃ ಇಲಾಖೆಯ HRMS ನೋಡಲ್ ಅಧಿಕಾರಿಯ ಮೂಲಕ HRMS ನಲ್ಲಿ Service Register ಅನ್ನು ಸೃಜಿಸಲು ಕ್ರಮವಹಿಸಲು ಹಾಗೂ ಪ್ರಸ್ತುತ HRMS ಮೂಲಕ ವೇತನ ಪಡೆಯುತ್ತಿರುವ ಅಧಿಕಾರಿ/ನೌಕರರು ತಮ್ಮ ವೈಯಕ್ತಿಕ ವಿವರಗಳ ಮಾಹಿತಿಯು ಅಪೂರ್ಣ/ತಿದ್ದುಪಡಿ ಇದ್ದಲ್ಲಿ ಸಂಪೂರ್ಣವಾದ ಮಾಹಿತಿಯನ್ನು HRMS ನಲ್ಲಿ ಇಂದೀಕರಿಸಲು ಆದೇಶಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular