HomeLatest NewsBREAKING : ಬೆಂಗಳೂರಿನ 'ವಾಹನ ಸವಾರ'ರೇ ಗಮನಿಸಿ : ಇಂದಿನಿಂದ ಆ.11 ರವರೆಗೆ ಈ ಮಾರ್ಗದಲ್ಲಿ...

BREAKING : ಬೆಂಗಳೂರಿನ ‘ವಾಹನ ಸವಾರ’ರೇ ಗಮನಿಸಿ : ಇಂದಿನಿಂದ ಆ.11 ರವರೆಗೆ ಈ ಮಾರ್ಗದಲ್ಲಿ ಸಂಚಾರ ನಿರ್ಬಂಧ.!

ಬೆಂಗಳೂರು : ಇಂದಿನಿಂದ ಆ.11 ರವರೆಗೆ ಈ ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಳಗೆರೆ ಟಿ ಜಂಕ್ಷನ್‌ನಿಂದ ಪಣತ್ತೂರು ರೈಲ್ವೆ ಬ್ರಿಡ್ಜ್ ಜಂಕ್ಟನ್‌ವರೆಗೆ ಬಿ.ಬಿ.ಎಂ.ಪಿ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳುವ ಸಂಬಂಧ ವಾಹನ ಸವಾರರ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ.

ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಣತ್ತೂರು ರೈಲ್ವೇ ಬ್ರಿಡ್ಜ್ ರಸ್ತೆಯಿಂದ ಬಳಗೆರೆ ಟಿ ಜಂಕ್ಷನ್ ವರೆಗೆ

ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗ
ಪಣತ್ತೂರು ಕಡೆಯಿಂದ ಬಳಗೆರೆ ಕಡೆಗೆ ಹೋಗುವ ವಾಹನ ಸವಾರರು ಪಣತ್ತೂರು ದಿಣ್ಣೆ ರಸ್ತೆಯಲ್ಲಿ ಚಲಿಸಿ ಪಣತ್ತೂರು ದಿಣ್ಣೆ ಬಳಿ ಎಡ ತಿರುವು ಪಡೆದು ಸಿಲ್ವರ್ ಓಕ್ ರಸ್ತೆಯಿಂದ ಬಳಗೆರೆ, ವಿಬ್‌ಗಯಾರ್ ರಸ್ತೆ ಮತ್ತು ವರ್ತೂರು ಕಡೆಗೆ ಸಂಚರಿಸಬಹುದಾಗಿದೆ.

ಬಳಗೆರೆ ಟಿ ಜಂಕ್ಷನ್ ಕಡೆಯಿಂದ ಪಣತ್ತೂರು ಕಡೆಗೆ ಹೋಗುವ ವಾಹನ ಸವಾರರು ಪಣತ್ತೂರು ದಿಣ್ಣೆ ರಸ್ತೆ, ವಿಬ್‌ಗಯಾರ್ ರಸ್ತೆ ಹಾಗೂ ಮಾರತ್ತಹಳ್ಳಿ ಬ್ರಿಡ್ಜ್ ಮೂಲಕ ಪಣತ್ತೂರು ಕಡೆಗೆ ಸಂಚರಿಸಬಹುದಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular