ಬೆಂಗಳೂರು : ಬೆಂಗಳೂರಿನ ವಾಹನ ಸವಾರರೇ ಗಮನಿಸಿ..’ಕ್ರಿಸ್ ಮಸ್’ ಪ್ರಯುಕ್ತ ಇಂದಿನಿಂದ 4 ದಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಈ ಕುರಿತು ಬೆಂಗಳೂರಿನ ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
ದಿನಾಂಕ 24.12.2025 ರಿಂದ ದಿನಾಂಕ: 28.12.2025 ರವರೆಗೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮಹದೇವಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಫಿನಿಕ್ಸ್ ಮಾಲ್, ವಿಆರ್ ಮಾಲ್ ಮತ್ತು ನೆಕ್ಸಸ್ ಶಾಂತಿನಿಕೇತನ ಬಳಿ ಮಧ್ಯಾಹ್ನ 12:00 ಗಂಟೆಯಿಂದ ರಾತ್ರಿ 11:00 ಗಂಟೆಯವರೆಗೆ ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.
ವಾಹನ ನಿಲುಗಡೆ ನಿರ್ಬಂಧಿಸಿರುವ ರಸ್ತೆಗಳು:
1. ಐ.ಟಿ.ಪಿ.ಎಲ್ ರಸ್ತೆ ಬಿ ನಾರಾಯಣಪುರ ಶೆಲ್ ಪೆಟ್ರೋಲ್ ಬಂಕ್ನಿಂದ ಗರುಡಚಾರ್ಪಾಳ್ಯ ಡೆಕಾಡ್ಲಾನ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ.
2. ಐ.ಟಿ.ಪಿ.ಎಲ್ ರಸ್ತೆ ಮೆಡಿಕವರ್ ಆಸ್ಪತ್ರೆಯಿಂದ ಬಿಗ್ಬಜಾರ್ ಜಂಕ್ಷನ್ವರೆಗೂ ಎರಡೂ ಕಡೆಗಳಲ್ಲಿ.
ಓಲಾ ಮತ್ತು ಉಬರ್ ಪಿಕ್ ಅಪ್ ಮತ್ತು ಡ್ರಾಪ್ ಆಫ್ ಪಾಯಿಂಟ್ಗಳು:
1. ಫಿನಿಕ್ಸ್ ಮಾಲ್ಗೆ ಬರುವವರಿಗೆ ಐ.ಟಿ.ಪಿ.ಎಲ್ ಮುಖ್ಯರಸ್ತೆಯ ಬೆಸ್ಕಾಂ ಕಛೇರಿ ಬಳಿ ಡ್ರಾಪ್ ಆಫ್ ಪಾಯಿಂಟ್ ಮತ್ತು ಲೌರಿ ಜಂಕ್ಷನ್ ಬಳಿ ಪಿಕ್ ಅಪ್ ಪಾಯಿಂಟ್.
2. ನೆಕ್ಸಸ್ ಶಾಂತಿನಿಕೇತನ್ ಮಾಲ್ಗೆ ಬರುವವರಿಗೆ ರಾಜಪಾಳ್ಯ ಬಳಿ ಡ್ರಾಪ್ ಆಫ್ ಪಾಯಿಂಟ್ ಹಾಗೂ ಆಸ್ಟರ್ ಆಸ್ಪತ್ರೆ ಬಳಿ ಪಿಕ್ ಅಪ್ ಪಾಯಿಂಟ್.
ವಿಶೇಷ ಸೂಚನೆ:
1. ಹೂಡಿ ಕಡೆಯಿಂದ ಫಿನಿಕ್ಸ್ ಮಾಲ್ಗೆ ಬರುವ ವಾಹನಗಳು ಕಡ್ಡಾಯವಾಗಿ ಕಾಮಧೇನು ನಗರ ಬಳಿ ಯು ಟರ್ನ್ ಪಡೆದು, ಶೆಲ್ ಪೆಟ್ರೊಲ್ ಬಂಕ್ ಬಳಿ ಎಡ ತಿರುವು ಪಡೆದು ರೈಲ್ವೇ ಪ್ಯಾರಲಲ್ ರಸ್ತೆಯಲ್ಲಿ ಸಂಚರಿಸಿ ಫಿನಿಕ್ಸ್ ಮಾಲ್ ಹಿಂಭಾಗ ಗೇಟ್ ಮೂಲಕ ಫಿನಿಕ್ಸ್ ಮಾಲ್ ಪ್ರವೇಶಿಸಿವುದು.
2. ಕೆ.ಆರ್.ಪುರ ರೈಲು ನಿಲ್ದಾಣದ ಕಡೆಯಿಂದ ಮಾಲ್ಗೆ ಬರುವ ವಾಹನಗಳು ಕಡ್ಡಾಯವಾಗಿ ಶೆಲ್ ಪೆಟ್ರೋಲ್ ಬಂಕ್ ಬಳಿ ಎಡತಿರುವು ಪಡೆದು ರೈಲ್ವೇ ಪ್ಯಾರಲಲ್ ರಸ್ತೆಯಲ್ಲಿ ಸಂಚರಿಸಿ ಫಿನಿಕ್ಸ್ ಮಾಲ್ ಹಿಂಭಾಗ ಗೇಟ್ ಮೂಲಕ ಫಿನಿಕ್ಸ್ ಮಾಲ್ ಪ್ರವೇಶಿಸುವುದು.

