ಬೆಂಗಳೂರು : 2025-26ನೇ ಸಾಲಿನಲ್ಲಿ ನ್ಯಾಷನಲ್ ಮೀನ್ಸ್-ಕಮ್ ಮೆರಿಟ್ ವಿದ್ಯಾರ್ಥಿ ವೇತನ(NMMS) ಪರೀಕ್ಷೆಯನ್ನು ದಿನಾಂಕ:11.01.2026(ಭಾನುವಾರ)ರಂದು ನಡೆಸುವುದಾಗಿ ತಿಳಿಸಲಾಗಿತ್ತು. ಕಾರಣಾಂತರಗಳಿಂದ ಸದರಿ ಪರೀಕ್ಷೆಯನ್ನು ಮುಂದೂಡಿ ದಿನಾಂಕ:18.01.2026 (ಭಾನುವಾರ)ರಂದು ನಿಗದಿಪಡಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ 2025-26ನೇ ಸಾಲಿನಲ್ಲಿ ನ್ಯಾಷನಲ್ ಮೀನ್ಸ್-ಕಮ್ ಮೆರಿಟ್ ವಿದ್ಯಾರ್ಥಿ ವೇತನ(NMMS) ಪರೀಕ್ಷೆಯನ್ನು ದಿನಾಂಕ:11.01.2026(ಭಾನುವಾರ)ರಂದು ನಡೆಸುವುದಾಗಿ ಉಲ್ಲೇಖ(2)ರ ಈ ಕಛೇರಿ ಜ್ಞಾಪನದಲ್ಲಿ ತಿಳಿಸಲಾಗಿತ್ತು. ಕಾರಣಾಂತರಗಳಿಂದ ಸದರಿ ಪರೀಕ್ಷೆಯನ್ನು ಮುಂದೂಡಿ ದಿನಾಂಕ:18.01.2026 (ಭಾನುವಾರ)ರಂದು ನಿಗದಿಪಡಿಸಲಾಗಿದೆ. ಈ ಬಗ್ಗೆ ಜಿಲ್ಲೆ, ತಾಲ್ಲೂಕು, ಶಾಲಾ ಹಂತದಲ್ಲಿ ವ್ಯಾಪಕ ಪ್ರಚಾರ ನೀಡಿ, ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸಲು ಆಗತ್ಯ ಕ್ರಮವಹಿಸಲು ತಿಳಿಸಿದೆ. ಹಾಗೂ ಈಗಾಗಲೇ NMMS ಪರೀಕ್ಷೆಗೆ ನಿಗದಿಯಾಗಿರುವ ಪರೀಕ್ಷಾ ಕೇಂದ್ರಗಳನ್ನು ಬೇರೆ ಯಾವುದೇ ಪರೀಕ್ಷೆಗಳಿಗೆ ನೀಡದಂತೆ ಕಮವಹಿಸಲು ಕಾರ್ಯನಿರ್ವಾಹಕ ನಿರ್ದೇಶಕರು ಸೂಚಿಸಿದ್ದಾರೆ.


