ಬೆಂಗಳೂರು : ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯಡಿಯಲ್ಲಿ, ಪರಿಶಿಷ್ಟ ಜಾತಿಯ (SC) ಯುವಕ/ಯುವತಿಯರು ಇತರೆ ಜಾತಿಯವರನ್ನು ವಿವಾಹವಾದಲ್ಲಿ ಅಂತಹ ದಂಪತಿಗಳಿಗೆ ಆರ್ಥಿಕ ನೆರವು (ಪ್ರೋತ್ಸಾಹಧನ) ಲಭ್ಯವಿರುತ್ತದೆ.
ಈ ಮೂಲಕ ಸರ್ಕಾರವು ಅಂತರ್ಜಾತಿ ವಿವಾಹಗಳನ್ನು ಉತ್ತೇಜಿಸಿ, ಅವರಿಗೆ ಆರ್ಥಿಕವಾಗಿ ಬೆಂಬಲ ನೀಡುತ್ತದೆ.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಬಹುದಾಗಿದೆ.
https://swdservices.karnataka.gov.in/swI…/ICM/ICMHome.aspx
* ಪರಿಶಿಷ್ಟ ಪಂಗಡದ ಪುರುಷರು ಇತರೆ ಜಾತಿಯ ಹೆಣ್ಣು ಮಕ್ಕಳನ್ನು ವಿವಾಹವಾದಲ್ಲಿ ರೂ.2.00,000/- (ಎರಡು ಲಕ್ಷ ರೂಪಾಯಿಗಳು ಮಾತ್ರ) ಹಾಗೂ ಪರಿಶಿಷ್ಟ ವರ್ಗದ ಹೆಣ್ಣುಮಕ್ಕಳನ್ನು ಇತರೆ ಜಾತಿಯ ಪುರುಷರು ವಿವಾಹವಾದಲ್ಲಿ ರೂ.3,00.000/- (ಮೂರು ಲಕ್ಷ ರೂಪಾಯಿಗಳು ಮಾತ್ರ)ಗಳನ್ನು ಒಂದು ಬಾರಿಗೆ ಮಾತ್ರ ನೀಡಲಾಗುತ್ತದೆ.
* ಇತರೆ ಸವರ್ಣೀಯ ಜಾತಿಯ ಹೆಣ್ಣು, ಪರಿಶಿಷ್ಟ ಪಂಗಡದ ಪುರುಷರನ್ನು ವಿವಾಹವಾದಲ್ಲಿ ರೂ.2.00 ಲಕ್ಷಗಳನ್ನು ಮಂಜೂರು ಮಾಡುವುದು. ಪ್ರೋತ್ಸಾಹ ಧನ ಮಂಜೂರಾದ ವರ್ಷದಲ್ಲಿ ಮೊದಲನೇ ಕಂತಾಗಿ ರೂ.1.00 ಲಕ್ಷಗಳಲ್ಲಿ ರೂ.50.000/-ಗಳನ್ನು ಬ್ಯಾಂಕ್ ಚೆಕ್ ಮುಖಾಂತರ ದಂಪತಿಗಳ ಹೆಸರಿನಲ್ಲಿ ಇರುವ ಜಂಟಿ ಖಾತೆಗೆ ನೀಡುವುದು ಮತ್ತು ರೂ.50,000/-ಗಳನ್ನು ರಾಷ್ಟ್ರೀಯ ಉಳಿತಾಯ ಪತ್ರದ ರೂಪದಲ್ಲಿ (ಎನ್.ಎಸ್.ಸಿ) ಜಂಟಿಯಾಗಿ ಪತಿ-ಪತ್ನಿ ಇಬ್ಬರ ಹೆಸರಿನಲ್ಲಿ ನೀಡುವುದು. ಮೊದಲನೇ ಕಂತಿನ ಹಣ ನೀಡಿದ ದಿನದಿಂದ ಒಂದು ವರ್ಷಕ್ಕೆ ಎರಡನೇ ಕಂತಾಗಿ ರೂ.1.00 ಲಕ್ಷಗಳಲ್ಲಿ ರೂ.50.000/- ಗಳನ್ನು ಬ್ಯಾಂಕ್ ಚೆಕ್ ಮುಖಾಂತರ ದಂಪತಿಗಳ ಹೆಸರಿನಲ್ಲಿ ಇರುವ ಜಂಟಿ ಖಾತೆಗೆ ನೀಡುವುದು ಮತ್ತು ರೂ.50.000/-ಗಳನ್ನು ರಾಷ್ಟ್ರೀಯ ಉಳಿತಾಯ ಪತ್ರದ ರೂಪದಲ್ಲಿ (ಎನ್.ಎಸ್.ಸಿ) ಜಂಟಿಯಾಗಿ ಪತಿ-ಪತ್ನಿ ಇಬ್ಬರ ಹೆಸರಿನಲ್ಲಿ ನೀಡಲಾಗುತ್ತದೆ.
* ಪರಿಶಿಷ್ಟ ಪಂಗಡದ ಹೆಣ್ಣು ಇತರೆ ಸವರ್ಣೀಯ ಜಾತಿಯ ಪುರುಷನನ್ನು ವಿವಾಹವಾದಲ್ಲಿ ರೂ.3.00 ಲಕ್ಷಗಳನ್ನು ಮಂಜೂರು ಮಾಡುವುದು. ಪ್ರೋತ್ಸಾಹ ಧನ ಮಂಜೂರಾದ ವರ್ಷದಲ್ಲಿ ಮೊದಲನೇ ಕಂತಾಗಿ ರೂ.1.50 ಲಕ್ಷಗಳಲ್ಲಿ ರೂ.75.000/-ಗಳನ್ನು ಬ್ಯಾಂಕ್ ಚೆಕ್ ಮುಖಾಂತರ ದಂಪತಿಗಳ ಹೆಸರಿನಲ್ಲಿ ಇರುವ ಜಂಟಿ ಖಾತೆಗೆ ನೀಡುವುದು ಮತ್ತು ರೂ.75,000/-ಗಳನ್ನು ರಾಷ್ಟ್ರೀಯ ಉಳಿತಾಯ ಪತ್ರದ ರೂಪದಲ್ಲಿ (ಎನ್.ಎಸ್.ಸಿ) ಜಂಟಿಯಾಗಿ ಪತಿ-ಪತ್ನಿ ಇಬ್ಬರ ಹೆಸರಿನಲ್ಲಿ ನೀಡುವುದು. ಮೊದಲನೇ ಕಂತಿನ ಹಣ ನೀಡಿದ ದಿನದಿಂದ ಒಂದು ವರ್ಷಕ್ಕೆ ಎರಡನೇ ಕಂತಾಗಿ. ರೂ.1.50 ಲಕ್ಷಗಳಲ್ಲಿ ರೂ.75,000/-ಗಳನ್ನು ಬ್ಯಾಂಕ್ ಚೆಕ್ ಮುಖಾಂತರ ದಂಪತಿಗಳ ಹೆಸರಿನಲ್ಲಿ ಇರುವ ಜಂಟಿ ಖಾತೆಗೆ ನೀಡುವುದು ಮತ್ತು ರೂ.75,000/-ಗಳನ್ನು ರಾಷ್ಟ್ರೀಯ ಉಳಿತಾಯ ಪತ್ರದ ರೂಪದಲ್ಲಿ (ಎನ್.ಎಸ್.ಸಿ) ಜಂಟಿಯಾಗಿ ಪತಿ-ಪತ್ನಿ ಇಬ್ಬರ ಹೆಸರಿನಲ್ಲಿ ನೀಡುವುದು.
* ಒಟ್ಟು ಮೊತ್ತ ನೀಡುವ ಪೂರ್ವದಲ್ಲಿ ಪತಿ ನಿಧನರಾಗಿದ್ದಲ್ಲಿ ಉಳಿದ ಹಣವನ್ನು ಪತ್ನಿ ಹೆಸರಿಗೆ ರಾಷ್ಟ್ರೀಯ ಉಳಿತಾಯ ಪತ್ರದ (ಎನ್.ಎಸ್.ಸಿ) ರೂಪದಲ್ಲಿ ನೀಡುವುದು. ಒಂದು ವೇಳೆ ಪತ್ನಿ ನಿಧನರಾಗಿದ್ದಲ್ಲಿ ಉಳಿದ ಹಣವನ್ನು ಅವರ ಮಕ್ಕಳ ಹೆಸರಿಗೆ ರಾಷ್ಟ್ರೀಯ ಉಳಿತಾಯ ಪತ್ರದ ರೂಪದಲ್ಲಿ (ಎನ್.ಎಸ್.ಸಿ) ನೀಡುವುದು. ಮಕ್ಕಳು ಇಲ್ಲದಿದ್ದಲ್ಲಿ ಉಳಿದ ಹಣ ನೀಡಲು ಬರುವುದಿಲ್ಲ.
* ದಂಪತಿಗಳ ವಯೋಮಿತಿ:- ಹೆಣ್ಣಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 42 ವರ್ಷ, ಗಂಡಿಗೆ ಕನಿಷ್ಠ 21 ವರ್ಷದಿಂದ 45 ವರ್ಷ ಇರುವವರು ಮಾತ್ರ ಅರ್ಹರು.
* ಪತಿ-ಪತ್ನಿ ಇಬ್ಬರ ವಾರ್ಷಿಕ ಆದಾಯ ಸೇರಿ ರೂ.50,000/-ಗಳಿಗೆ ಒಳಪಟ್ಟಿರಬೇಕು. ಉಪ ನೋಂದಣಾಧಿಕಾರಿಗಳು ನೀಡಿರುವ ಮೂಲ ಅಂತರ್ಜಾತಿ ವಿವಾಹ ಪ್ರಮಾಣ ಪತ್ರಗಳನ್ನು ಜಂಟಿ/ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ / ಯೋಜನಾ ಸಮನ್ವಾಧಿಕಾರಿಗಳು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ / ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪಡೆದು ಪ್ರೋತ್ಸಾಹ ಧನ ಮಂಜೂರು ಮ ಮಾಡತಕ್ಕದ್ದು. ಸದರಿ ಯೋಜನೆಯಡಿ ಪ್ರಯೋಜನ ಪಡೆಯುವ ದಂಪತಿಗಳು ಸ್ವಂತ ಜಿಲ್ಲೆಯಲ್ಲಿ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.


