HomeLatest Newsರೈತರೇ ಗಮನಿಸಿ : ಕೃಷಿ ಪಂಪ್‌’ಸೆಟ್‌ಗಳಿಗೆ ವಿದ್ಯುತ್ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ರೈತರೇ ಗಮನಿಸಿ : ಕೃಷಿ ಪಂಪ್‌’ಸೆಟ್‌ಗಳಿಗೆ ವಿದ್ಯುತ್ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಶಿವಮೊಗ್ಗ : ತಾಲೂಕು ಗ್ರಾಮೀಣ ಮೆಸ್ಕಾಂ ಉಪವಿಭಾಗ ವ್ಯಾಪ್ತಿಗೆ ಒಳಪಡುವ ಅಬ್ಬಲಗೆರೆ, ಪಿಳ್ಳಂಗಿರಿ, ಹೊಳಲೂರು, ಗಾಜನೂರು ಮತ್ತು ಸಂತೇಕಡೂರು (ಘಟಕ-2) ಶಾಖಾ ವ್ಯಾಪ್ತಿಗೆ ಒಳಪಡುವ ಪ.ಜಾ/ಪ.ಪಂ.ಕ್ಕೆ ಸೇರುವ ರೈತರು ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸೌಲಭ್ಯ ಪಡೆಯಲು ಹಾಗೂ ಈ ಹಿಂದೆ ಗಂಗಾಕಲ್ಯಾಣ ಮತ್ತು ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ಪಡೆಯದ ರೈತರಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಗ್ರಾಮೀಣ ಉಪವಿಭಾಗ ಮೆಸ್ಕಾಂ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಆರ್‌ಟಿಸಿ, ಆಧಾರ್ ಕಾಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಫೋಟೋ, ಬಿಪಿಎಲ್ ರೇಷನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಜೇರಾಕ್ಸ್, ಬೋರವೆಲ್ ಜೊತೆ ರೈತರ ಜಿಪಿಎಸ್ ಪೋಟೋ ಮತ್ತು ಫೋನ್ ನಂ.ಗಳನ್ನು ಲಗತ್ತಿಸಿ ನ.15 ರೊಳಗಾಗಿ ಸಲ್ಲಿಸುವಂತೆ ಪಾಲನೆ ಮತ್ತು ನಿರ್ವಹಣೆ ಗ್ರಾಮೀಣ ಉಪವಿಭಾಗ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular