ಧಾರವಾಡ : 2026-27 ನೇ ಸಾಲಿನಲ್ಲಿ ಕೃಷಿ ಇಲಾಖೆಯಿಂದ ಹೈ-ಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಕಂಬ್ಯೆನ್ಡ ಹಾರ್ವೆಸ್ಟರ್ ಹಬ್ ಸಾಮಾನ್ಯ ರೈತರಿಗೆ (ವೈಯಕ್ತಿಕ) ಹಾಗೂ ಸಂಘ ಸಂಸ್ಥೆಗಳಿಗೆ ಹಾಗೂ ಶುಗರ್ ಕೇನ್ ಹಾರ್ವೆಸ್ಟರ್ ಹಬ್ ಸಾಮಾನ್ಯ ರೈತರಿಗೆ (ವೈಯಕ್ತಿಕ) ಅನುಷ್ಟಾನ ಮಾಡಲು ಸಹಾಯಧನದಡಿ ಅರ್ಜಿ ಆಹ್ವಾನಿಸಲಾಗಿದೆ.
ಗರಿಷ್ಟ 50% ರಿಂದ 70% (ಎಲ್-1 ದರಕ್ಕೆ) ಸಹಾಯಧನ ನೀಡಲಾಗುವುದು. ಎಫ್‍ಐಡಿ ಹೊಂದಿರುವ ರೈತರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ ಹಾಗೂ ಹೊಸ ಸಂಘ ಸಂಸ್ಥೆಗಳಾದಲ್ಲಿ ಕೃಷಿ ಯಂತ್ರೋಪಕರಣ ಬಳಕೆಯಲ್ಲಿ ಕನಿಷ್ಠ ಇತ್ತೀಚಿನ 2 ವರ್ಷಗಳ (2024-25, 2025-26) ಅನುಭವವನ್ನು ಹೊಂದಿರುವ ಸಂಘ ಸಂಸ್ಥೆಗಳು, ಕೃಷಿ ಯಂತ್ರೋಪಕರಣ ಬ್ಯಾಂಕ್ ನಿರ್ವಹಿಸುತ್ತಿರುವ ಸಂಸ್ಥೆ, ರೈತ ಉತ್ಪಾದಕ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅಂತಹ ಸಂಘ ಸಂಸ್ಥೆಗಳು ಸಹ ಇತ್ತೀಚಿನ 2 ವರ್ಷಗಳ (2024-25, 2025-26) ಲೆಕ್ಕ ಪರಿಶೋಧಕರ ವರದಿಯನ್ನು ಹೊಂದಿರಬೇಕು.
ಕಂಬ್ಯೆನ್ಡ ಹಾರ್ವೆಸ್ಟರ್ ಹಬ್‍ನಲ್ಲಿ ಕಂಬ್ಯೆನ್ಡ ಹಾರ್ವೇಸ್ಟರ್ ದೊಂದಿಗೆ ಬೇಲರ್ ಹಾಗೂ ಪ್ರತಿ ಶುಗರ್ ಕೇನ್ ಹಾರ್ವೆಸ್ಟರ್ ಹಬ್ರೊಂದಿಗೆ ಇಂಟರ್ ರೋ ರೋಟಾವೆಟರ್ ದಾಸ್ತಾನೀಕರಿಸುವುದು ಕಡ್ಡಾಯವಾಗಿರುತ್ತದೆ.
ಅರ್ಜಿದಾರರು ಇಚ್ಛಿಸುವ ಹಬ್ ಅರ್ಜಿ ನಮೂನೆಯಲ್ಲಿ ಸಂಬಂಧಿಸಿದ ದಾಖಲಾತಿ (ಸಂಸ್ಥೆ ನೊಂದಾಯಿಸಿದ ಪ್ರಮಾಣ ಪತ್ರ, ಪಹಣಿ, ಗುರುತಿನ ಪತ್ರ, ಬ್ಯಾಂಕ ಖಾತೆ ಸಂಖ್ಯೆ, ರೂ.100 ಗಳ ಛಾಪಾ ಕಾಗದದ ಮೇಲೆ ಹಬ್‍ನ್ನು ಪರಬಾರೆ ಮಾಡುವುದಿಲ್ಲವೆಂದು ಮುಚ್ಛಳಿಕೆ ಪತ್ರ ಮತ್ತು ಸಹಾಯಧನವು Credit linked Back ended Subsidy ಆಗಿರುವುದರಿಂದ, ಸಂಬಂಧಿಸಿರುವ ಬ್ಯಾಂಕ್ ನಿಂದ “ತಾತ್ವಿಕ ಸಾಲ ಮಂಜುರಾತಿ (In Principal Loan Sanction Letter)” ಪತ್ರ ಹಾಗೂ ಶುಗರ್ ಕೇನ್ ಹಾರ್ವೆಸ್ಟರ್ ಹಬ್ ನಲ್ಲಿ ಅರ್ಜಿ ಸಲ್ಲಿಸಲು ಇಚ್ಛಿಸುವ ಅರ್ಜಿದಾರರು ತಮ್ಮ ವ್ಯಾಪ್ತಿಯಲ್ಲಿ ಬರುವ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಕಟಾವು ಮಾಡಿಕೊಳ್ಳಲು ಲಿಖಿತ “ಒಪ್ಪಂದ ಪ್ರಮಾಣ ಪತ್ರ”ವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು)
ಆಗಸ್ಟ್ 10, 2026 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಸ್ವೀಕೃತವಾದ ಅರ್ಜಿಗಳನ್ನು ಜಿಲ್ಲಾ ಮಟ್ಟದ ಉಪಕರಣ ಸಮಿತಿಯಲ್ಲಿ ಮಂಡಿಸಿ, ಪರಿಶೀಲಿಸಿ ಅರ್ಜಿದಾರರ ಆಯ್ಕೆಯನ್ನು ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ/ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

