ಬೆಂಗಳೂರು: ಐಪಿಎಲ್ ಪಂದ್ಯಾವಳಿ ವೀಕ್ಷಣೆಗೆ ಟಿಕೆಟ್ ಖರೀದಿಸುವ ಸಂದರ್ಭದಲ್ಲಿ ನಕಲಿ ಲಿಂಕ್ ಗಳ ಬಗ್ಗೆ ಕ್ರಿಕೆಟ್ ಪ್ರೇಮಿಗಳು ಎಚ್ಚರ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಸದ್ಯದಲ್ಲಿಯೇ ಆರಂಭವಾಗಲಿರುವ ಐಪಿಎಲ್ ಕ್ರಿಕೆಟ್ ಟೂರ್ನಿ ಪಂದ್ಯಾವಳಿ ವೀಕ್ಷಣೆಗೆ ಟಿಕೆಟ್ ಖರೀದಿಸುವಾಗ ವಂಚನೆಗಳು ನಡೆಯುವ ಸಾಧ್ಯತೆ ಇದೆ. ನಕಲಿ ಲಿಂಕ್ ಗಳು ಮತ್ತು ಕೊನೆ ಕ್ಷಣದ ವ್ಯವಹಾರ ವಂಚನೆಗಳ ಜಾಲಕ್ಕೆ ಬೀಳದಂತೆ ಪೊಲೀಸರು ಮನವಿ ಮಾಡಿದ್ದಾರೆ.
ಐಪಿಎಲ್ ಪಂದ್ಯಾವಳಿ ಟಿಕೆಟ್ ಗಳನ್ನು ಅಧಿಕೃತ ಸ್ಥಳಗಳು ಅಥವಾ ವೆಬ್ಸೈಟ್ ಗಳ ಮೂಲಕವೇ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ಹಣ ಪಾವತಿಸುವ ಮೊದಲು ಪರಿಶೀಲನೆ ಮಾಡುವಂತೆ, ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸುವಂತೆ ಈಶಾನ್ಯ ವಿಭಾಗದ ಡಿಸಿಪಿ ಮಾಹಿತಿ ನೀಡಿದ್ದಾರೆ.

