ಮಂಗಳೂರು: ಕಂಕನಾಡಿ ನಗರ ಠಾಣಾ ಪೋಲೀಸರು ಪಡೀಲ್ ಸಮೀಪ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಮಹಮ್ಮದ್ ದಾವೂದ್ ಬಂಧಿತ ಆರೋಪಿ. ಪಡೀಲ್ ರೈಲ್ವೆ ಸೇತುವೆಯಿಂದ ಸರಿಪಳ್ಳ ಕಡೆಗೆ ಹೋಗುವ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಮಾದಕ ವಸ್ತು ಮಾರಾಟ ಮಾಡಲು ಗ್ರಾಹಕರಿಗೆ ಕಾಯುತ್ತಿದ್ದ ವೇಳೆ ಪೊಲೀಸ್ ವಾಹನ ಕಂಡು ಪರಾರಿಯಾಗಿದ್ದಾನೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆತನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ 80 ಸಾವಿರ ರೂ. ಮೌಲ್ಯದ 16.11 ಗ್ರಾಂ ತೂಕದ ಎಂಡಿಎಂಎ ಗಾಂಜಾ, ಬ್ಯಾಟರಿ ಚಾಲಿತ ತೂಕ ಮಾಪನ ಪತ್ತೆಯಾಗಿದೆ. ಆತನ ಬಳಿ ಇದ್ದ ಮೊಬೈಲ್, ಸ್ಕೂಟರ್ ಸಹಿತ 1.60 ಲಕ್ಷ ರೂ. ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

