HomeIndiaSHOCKING: ಎಟಿಎಂನಲ್ಲಿ ಹಣದ ಬದಲು ಹೊರ ಬಂದ ಹಾವು: ಬೆಚ್ಚಿಬಿದ್ದ ಗ್ರಾಹಕ

SHOCKING: ಎಟಿಎಂನಲ್ಲಿ ಹಣದ ಬದಲು ಹೊರ ಬಂದ ಹಾವು: ಬೆಚ್ಚಿಬಿದ್ದ ಗ್ರಾಹಕ

ನವದೆಹಲಿ: ಅಸ್ಸಾಂನ ನಜೀರಾ ಲಿಗಿರಿಪುಖುರಿ ಪ್ರದೇಶದಲ್ಲಿ ಎಟಿಎಂ ಯಂತ್ರದಿಂದ ಹಣದ ಬದಲು ಹಾವು ಹೊರ ಬಂದ ಪರಿಣಾಮ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ.

ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ನಗದು ಬದಲಿಗೆ ವಿಷಕಾರಿ ಹಾವು ಹೊರಬಂದಿದೆ. ಶುಕ್ರವಾರ ನಜೀರಾ ಲಿಗಿರಿಪುಖುರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಟಿಎಂನಿಂದ ಕರೆನ್ಸಿ ನೋಟುಗಳ ನಿರೀಕ್ಷೆಯಲ್ಲಿದ್ದ ವ್ಯಕ್ತಿ ಯಂತ್ರದಿಂದ ವಿಷಪೂರಿತ ನಾಗರ ಹಾವು ಹೊರ ಬರುವುದನ್ನು ಕಂಡು ಶಾಕ್ ಆಗಿ ಕೂಗಾಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಹಾವವನ್ನು ರಕ್ಷಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎಟಿಎಂ ಕಿಯೋಸ್ಕ್ ನಲ್ಲಿ ನಗದು ಬದಲು ಹಾವು ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ, ಈ ಹಿಂದೆ, ಗಾಜಿಯಾಬಾದ್‌ ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular