HomeLatest NewsAsto Tips:ಶಕುನ ಶಾಸ್ತ್ರ ಜೀವನದ ಸೂಚನೆ ನೀಡುವ ಶುಭ–ಅಶುಭ ಶಕುನಗಳು ಯಾವುವು?

Asto Tips:ಶಕುನ ಶಾಸ್ತ್ರ ಜೀವನದ ಸೂಚನೆ ನೀಡುವ ಶುಭ–ಅಶುಭ ಶಕುನಗಳು ಯಾವುವು?

ಬೆಂಗಳೂರು: ನಾವು ಯಾವುದಾದರೂ ಶುಭ ಕಾರ್ಯಕ್ಕೆ ಅಥವಾ ದೂರದ ಪ್ರಯಾಣಕ್ಕೆ ಹೊರಡುವಾಗ ಮನೆಯ ಹಿರಿಯರು ಶಕುನ ನೋಡಿ ಹೋಗು ಎಂದು ಹೇಳುವುದನ್ನು ಕೇಳಿರುತ್ತೇವೆ. ಕೆಲವೊಮ್ಮೆ ಬೆಕ್ಕು ಅಡ್ಡ ಬಂದರೆ ನಿಲ್ಲುತ್ತೇವೆ, ಇನ್ನು ಕೆಲವೊಮ್ಮೆ ಮುತ್ತೈದೆ ಎದುರಾದರೆ ಖುಷಿಪಡುತ್ತೇವೆ. ಹಾಗಾದರೆ, ಈ ಶಕುನ ಅಂದರೇನು? ಇದರ ಹಿಂದೆ ಜ್ಯೋತಿಷ್ಯ ವಿಜ್ಞಾನದ ರಹಸ್ಯವಿದೆಯೇ? ತಿಳಿಯೋಣ ಬನ್ನಿ.

ಏನಿದು ಶಕುನ ಶಾಸ್ತ್ರ?
ಜ್ಯೋತಿಷ್ಯ ವಿಜ್ಞಾನದ ಬೃಹತ್ ಸಂಹಿತೆಯ ಪ್ರಕಾರ, ಮನುಷ್ಯ ತನ್ನ ಪೂರ್ವ ಜನ್ಮದಲ್ಲಿ ಮಾಡಿದ ಶುಭ ಅಥವಾ ಅಶುಭ ಕಾರ್ಯಗಳ ಫಲಿತಾಂಶವನ್ನು ಪ್ರಕೃತಿಯು ಕೆಲವು ಚಿಹ್ನೆಗಳ ಮೂಲಕ ನಮಗೆ ಸೂಚಿಸುತ್ತದೆ. ಇದನ್ನೇ ಶಕುನ ಎನ್ನಲಾಗುತ್ತದೆ. ಶಕುನ ಎಂದರೆ ಸಂಸ್ಕೃತದಲ್ಲಿ ಪಕ್ಷಿ ಅಥವಾ ಶುಭ ಚಿಹ್ನೆ ಎಂಬ ಅರ್ಥವಿದೆ. ಇಂಗ್ಲಿಷಿನಲ್ಲಿ ಇದನ್ನು ‘Omen’ ಎನ್ನಲಾಗುತ್ತದೆ.

ಜನಪದ ಜೀವನದಲ್ಲಿ ಶಕುನವು ಹಾಸುಹೊಕ್ಕಾಗಿದೆ. ಒಂದು ಕಡೆ ಶುಭ ಶಕುನಗಳು ಮನುಷ್ಯನ ಆತ್ಮವಿಶ್ವಾಸವನ್ನು ಹೆಚ್ಚಿಸಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂಬ ಭರವಸೆ ನೀಡಿದರೆ, ಕೆಟ್ಟ ಶಕುನಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸುತ್ತವೆ. ಇದು ಕೇವಲ ಮೂಢನಂಬಿಕೆಯಲ್ಲ, ಬದಲಾಗಿ ಪ್ರಕೃತಿಯು ನಮಗೆ ನೀಡುವ ಸಿಗ್ನಲ್ಗಳು ಎಂಬುದು ಶಕುನ ಶಾಸ್ತ್ರದ ವಾದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾವು ದಿನನಿತ್ಯದ ಬದುಕಿನಲ್ಲಿ ಎದುರಿಸುವ ಸಣ್ಣಪುಟ್ಟ ಘಟನೆಗಳೇ ಭವಿಷ್ಯದ ಮುನ್ಸೂಚನೆ ನೀಡುತ್ತವೆ ಎಂಬುದು ಹಿರಿಯರ ನಂಬಿಕೆ. ಅಂತಹ ಕೆಲವು ಪ್ರಮುಖ ಶುಭ ಮತ್ತು ಅಶುಭ ಶಕುನಗಳ ಪಟ್ಟಿ ಇಲ್ಲಿದೆ

ಯಾವುದಾದರೂ ಕೆಲಸಕ್ಕೆ ಹೊರಡುವಾಗ ಎರಡು ಬಾರಿ ಸೀನು ಬಂದರೆ ಅದು ಮಂಗಳಕರ.

ಅಕಸ್ಮಾತ್ ಗಾಜು ಒಡೆದರೆ ಅದು ಕೆಟ್ಟ ಕಣ್ಣು (Evil Eye) ನಿವಾರಣೆಯ ಸಂಕೇತವಂತೆ

ಎಡಗೈ ತುರಿಸಿದರೆ ಹಣ ಬರಲಿದೆ ಎಂದರ್ಥ. ಹಾಗೆಯೇ ಹೊರಗೆ ಹೋಗುವಾಗ ಜೇಬಿನಿಂದ ಹಣ ಕೆಳಗೆ ಬಿದ್ದರೆ ಧನಲಾಭದ ಸೂಚನೆ.

ಹಸು ಕರುಗಳಿಗೆ ಹಾಲುಣಿಸುವುದನ್ನು ನೋಡುವುದು, ಮುಂಗುಸಿ ಕಾಣಿಸುವುದು ಅಥವಾ ದೀಪಾವಳಿ ರಾತ್ರಿ ಕಪ್ಪು ಬೆಕ್ಕು ಕಾಣುವುದು ತುಂಬಾ ಶ್ರೇಯಸ್ಕರ.

ದಾರಿಯಲ್ಲಿ ಶವಯಾತ್ರೆ ಕಂಡರೆ ಮೊದಲು ನಮಸ್ಕರಿಸಿ ಪ್ರಾರ್ಥಿಸಿ; ಅಂದು ನಿಮ್ಮ ಕೆಲಸಗಳು ಯಶಸ್ವಿಯಾಗುತ್ತವೆ ಎಂಬ ನಂಬಿಕೆಯಿದೆ.

ಕೆಲಸಕ್ಕೆ ಹೋಗುವಾಗ ದೇವಸ್ಥಾನದ ಪೂಜೆಯ ದನಿ ಅಥವಾ ಘಂಟಾನಾದ ಕೇಳಿಸಿದರೆ ಆ ಕೆಲಸ ಖಂಡಿತ ಪೂರ್ಣಗೊಳ್ಳುತ್ತದೆ.

ಯಾವುದು ಅಶುಭ ಶಕುನ? (Bad Omens)

ಶುಭ ಕಾರ್ಯಕ್ಕೆ ಹೊರಡುವಾಗ ಒಬ್ಬರೇ ಸೀನಿದರೆ ಸ್ವಲ್ಪ ಸಮಯ ಕುಳಿತು ನೀರು ಕುಡಿದು ಆಮೇಲೆ ಹೊರಡುವುದು ಒಳಿತು.

ಹೆಣ್ಣಿಗೆ ಬಲಗಣ್ಣು ಮತ್ತು ಗಂಡಿಗೆ ಎಡಗಣ್ಣು ಸೆಳೆದರೆ ಅದು ಅಶುಭದ ಸೂಚನೆ ಎನ್ನಲಾಗುತ್ತದೆ.

ಬಾಣಲೆಯಿಂದ ಹಾಲು ಚೆಲ್ಲುವುದು ಅಥವಾ ಉಕ್ಕಿ ಸುಡುವುದು ಒಳ್ಳೆಯದಲ್ಲ.

ಕಾರಣವಿಲ್ಲದೆ ನಾಯಿ ಬೊಗಳುವುದು ಅಥವಾ ಮನೆಯಿಂದ ಹೊರಡುವಾಗ ಕಾಗೆ ತೀವ್ರವಾಗಿ ಅರಚುವುದು ಅಡೆತಡೆಗಳ ಮುನ್ಸೂಚನೆ.

ಯಾರಾದರೂ ಮನೆಯಿಂದ ಹೊರಡುವಾಗ “ಎಲ್ಲಿಗೆ ಹೋಗುತ್ತೀರಿ?” ಎಂದು ಕೇಳುವುದು ಅತ್ಯಂತ ಕೆಟ್ಟ ಶಕುನ ಎಂದು ಪರಿಗಣಿಸಲಾಗುತ್ತದೆ.

ಬಲಗೈ ತುರಿಸಿದರೆ ಅನಗತ್ಯ ವೆಚ್ಚಗಳು ಹೆಚ್ಚಾಗುತ್ತವೆ ಎಂಬ ಎಚ್ಚರಿಕೆ ನೀಡುತ್ತದೆ.

ಮನೆಯಲ್ಲಿ ಕೆಂಪು ಇರುವೆಗಳ ಸಾಲು ಕಾಣಿಸಿಕೊಂಡರೆ ಅದನ್ನು ಅಶುಭ ಶಕುನವೆಂದು ಪರಿಗಣಿಸಲಾಗುತ್ತದೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular