HomeKarnatakaಶ್ರೀಕೃಷ್ಣಮಠದಲ್ಲಿ ಅಷ್ಟಮಂಗಳ ಪ್ರಶ್ನೆ: ಕಾಳಸರ್ಪ ದೋಷ; ಜಗತ್ತಿಗೆ ಕಾದಿದೆ ದೊಡ್ಡ ಕಂಟಕ: ಅನಾಹುತ ತಡೆಯಲು ಪರಿಹಾರಕ್ಕೆ...

ಶ್ರೀಕೃಷ್ಣಮಠದಲ್ಲಿ ಅಷ್ಟಮಂಗಳ ಪ್ರಶ್ನೆ: ಕಾಳಸರ್ಪ ದೋಷ; ಜಗತ್ತಿಗೆ ಕಾದಿದೆ ದೊಡ್ಡ ಕಂಟಕ: ಅನಾಹುತ ತಡೆಯಲು ಪರಿಹಾರಕ್ಕೆ ಸೂಚನೆ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅಷ್ಟಮಂಗಳ ಪ್ರಶ್ನೆ ಇಡಲಾಗಿತ್ತು. ಈ ವೇಳೆ ಬಂದಂತಹ ನುಡಿಗಟ್ಟಿನ ಪ್ರಕಾರ, ಕಾಳಸರ್ಪ ಯೋಗವಿರುದರಿಂದ ಇಡೀ ಲೋಕಕ್ಕೆ ಕಂಟಕ ಎದುರಾಗಲಿದೆ ಎಂದು ಉತ್ತರ ಬಂದಿದೆ. ಅಲ್ಲದೇ ದೋಷ ಪರಿಹಾರ ಮಾಡಿ ಅನಾಹುತವನ್ನು ತಡೆಯಲು ಕಡ್ದಾಯವಾಗಿ ಪರಿಹಾರವನ್ನೂ ಸೂಚಿಸಲಾಗಿದೆ.

ಲೋಕಕ್ಕೆ ಕಂಟಕ ಎನ್ನುವ ಉತ್ತರ ಬಂದಿರುವುದರಿಂದ ಪರಿಹಾರವನ್ನೂ ಸೂಚಿಸಲಾಗಿದ್ದು, ಅದನ್ನು ತುರ್ತಾಗಿ ಮಾಡಿಸಬೇಕಾಗಿದೆ ಎಂದು ಪರ್ಯಾಯ ಶಿರೂರು ಮಠದ ಯತಿಗಳು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶೀಘ್ರವೇ ಇದಕ್ಕೆ ಪರಿಹಾರ ಕಂಡುಕೊಂಡರೆ, ಎದುರಾಗುವ ಆಪತ್ತುಗಳು ಕಮ್ಮಿಯಾಗಲಿವೆ ಎನ್ನುವನುಡಿಗಟ್ಟು ಕೂಡ ಬಂದಿರುವುರಿಂದ ಸಮಾಧಾನ ತಂದಿದೆ. ದೇವಾಲಯ, ದೇಶಗಳಲ್ಲಿ ತೊಂದರೆಗಳು, ಅನಿರೀಕ್ಷಿತ ಸಮಸ್ಯೆಗಳು, ಜೀರ್ಣೋದ್ದಾರದ ಸಮಯದಲ್ಲಿ, ದೈವಿಕ ಅಪಚಾರ ಉಂಟಾದಂತಹ ಸಂದರ್ಭದಲ್ಲಿ, ಕಾರಣವನ್ನು ಕೇಳಲು, ಕರಾವಳಿ ಕರ್ನಾಟಕದ ಭಾಗದಲ್ಲಿ ಅಷ್ಟಮಂಗಳ ಪ್ರಶ್ನೆಯನ್ನು ಇಟ್ಟು ಪರಿಹಾರ ತಿಳಿದುಕೊಳ್ಳುವ ಕ್ರಮ, ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಜೊತೆಗೆ, ಪ್ರಶ್ನೆಯಲ್ಲಿ ಬರುವ ಪರಿಹಾರವನ್ನು ಮಾಡಿಸಲೇ ಬೇಕು ಎನ್ನುವುದನ್ನೂ ಪಾಲಿಸಿಕೊಂಡು ಬರಲಾಗುತ್ತಿದೆ.

ಉಡುಪಿ ಕೃಷ್ಣಮಠದಲ್ಲಿ ಇರುವ ಸಮಸ್ಯೆಗಳಿಗೆ ಪರಿಹಾರ ಮಾಡಿಸಬೇಕು. ಅಷ್ಟಮಂಗಳ ಪ್ರಶ್ನೆಯಲ್ಲಿ ಬಂದ ಉತ್ತರಗಳಿಗೆ ಕೆಲವೊಂದನ್ನು ಶೀಘ್ರದಲ್ಲೇ ಪರಿಹಾರ ಮಾಡಿಸಬೇಕು. ದೇಶಕ್ಕೆ ಈಗ ಕಾಳಸರ್ಪ ಯೋಗವಿದೆ, ಇದು ಲೋಕಕ್ಕೆ ಕಂಟಕದ ಸಮಯ. ಯಾಕೆಂದರೆ, ದೊಡ್ಡ ಅನಾಹುತವಾಗುವ ಸಾಧ್ಯತೆಯಿದೆ, ನಾಡಿಗೆ ಕಾಳಸರ್ಪ ದೋಷವಿದೆ. ಇದನ್ನು ಸರಿ ಪಡಿಸದಿದ್ದರೆ, ದೇಶಕ್ಕೆ ಅಪಾಯ ಎಂದು ಪರ್ಯಾಯ ಶಿರೂರು ಮಠದ ಯತಿಗಳಾದ ವೇದವರ್ಥನ ತೀರ್ಥರು ಹೇಳಿದ್ದಾರೆ.

ಅಷ್ಟಮಂಗಳ ಪ್ರಶ್ನೆಯಲ್ಲಿ ಬಂದಿದ್ದಕ್ಕೆ ಪರಿಹಾರವನ್ನು ತುರ್ತಾಗಿ ಮಾಡಿದರೆ, ಶ್ರೀಮಠದ ಸಮಸ್ಯೆಗೂ ಪರಿಹಾರ ಮಾಡಿದಂತಾಗುತ್ತದೆ. ಜೊತೆಗೆ, ದೇಶಕ್ಕೆ ಎದುರಾಗುವ ಗಂಢಾಂತರಕ್ಕೂ ಪರಿಹಾರವನ್ನು ಮಾಡಿದಂತಾಗುತ್ತದೆ ಎನ್ನುವ ನುಡಿಗಟ್ಟು ಪ್ರಶ್ನೆಯ ವೇಳೆ ಬಂದಿದೆ. ಇದನ್ನು ಆದಷ್ಟು ಬೇಗ ಮಾಡಿದರೆ ಉತ್ತಮ. ಇಲ್ಲಿನ ವ್ಯವಸ್ಥೆಯನ್ನು ಇನ್ನಷ್ಟು ವ್ಯವಸ್ಥಿತವಾಗಿ ಮಾಡಿದರೆ, ದೇವರು ಖುಷಿಯಾಗಿ ಎಲ್ಲಾ ಸಮಸ್ಯೆಯನ್ನು ಸರಿ ಮಾಡುತ್ತಾನೆ ಎಂದು ಶ್ರೀಗಳು ಹೇಳಿದ್ದಾರೆ.

ಹದಿನೆಂಟು ಕೋಟಿ ರಾಮ ಮಂತ್ರ ಜಪ, ಒಂದು ಕೋಟಿ ಕೃಷ್ಣ ಮಂತ್ರ ಜಪ, ವಿಷ್ಣು ಸಹಸ್ರ ನಾಮ ಸೇರಿದಂತೆ ಹಲವಾರು ಜಪಗಳನ್ನು ಮಾಡಲು ಅಷ್ಟಮಂಗಳ ಪ್ರಶ್ನೆಯಲ್ಲಿ ದೈವಜ್ಞರು ಸೂಚಿಸಿದ್ದಾರೆ. ಇದನ್ನು ಲೋಕದ ಜನರು ಸೇರಿ ಅಂದರೆ ಕೃಷ್ಣ ಭಕ್ತರು ಸೇರಿ ಮಾಡಬೇಕು ಎನ್ನುವ ಉತ್ತರ ಬಂದಿದೆ. ಇಲ್ಲಿ ಇರುವ ಸಮಸ್ಯೆಗಳನ್ನು ನಾವು ಅಷ್ಟಮಠದವರು ಸೇರಿ ಪರಿಹಾರ ಮಾಡುತ್ತೇವೆ ಎಂದು ಶ್ರೀಗಳು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular