HomeKarnatakaಸೌಜನ್ಯ ಅತ್ಯಾಚಾರ, ಕೊಲೆಪ್ರಕರಣದ ಮರು ತನಿಖೆ: SIT ತಂಡದಿಂದ ನನ್ನನ್ನು ಕೈಬಿಡಿ: ಸರ್ಕಾರಕ್ಕೆ ಪತ್ರ ಬರೆದ...

ಸೌಜನ್ಯ ಅತ್ಯಾಚಾರ, ಕೊಲೆಪ್ರಕರಣದ ಮರು ತನಿಖೆ: SIT ತಂಡದಿಂದ ನನ್ನನ್ನು ಕೈಬಿಡಿ: ಸರ್ಕಾರಕ್ಕೆ ಪತ್ರ ಬರೆದ ASP ವೆಂಕಟೇಶ್ ಪ್ರಸನ್ನ

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಆದರೆ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಸಹಾಯಕ ಪೊಲೀಸ್ ಅಧೀಕ್ಷಕರೊಬ್ಬರು ತಮ್ಮನ್ನು ಎಸ್ ಐಟಿ ಟೀಮ್ ನಿಂದ ಕೈ ಬಿಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಎಎಸ್ ಪಿ ವೆಂಕಟೇಶ್ ಪ್ರಸನ್ನ ಅವರು ರಾಜ್ಯ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ತಮ್ಮನ್ನು ಎಸ್ ಐಟಿ ತಂಡದಿಂದ ಕೈಬಿಡುವಂತೆ ಕೋರಿದ್ದಾರೆ. ಈ ಹಿಂದೆ ಸುಪ್ರೀಂ ಕೋರ್ಟ್ ಮರು ತನಿಖೆಗೆ ಆದೇಶಿಸಿದಾಗ, ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದವರು ಹೊಸ ತಂಡದಲ್ಲಿ ಇರಬಾರದು ಎಂದು ಸೂಚಿಸಿತ್ತು. ಸೆಪ್ಟೆಂಬರ್ 24ರಂದು ಐಜಿಪಿ ಶಶಿಕುಮಾರ್ ನೇತೃತ್ವದಲ್ಲಿ ಐವರ ತಂಡವನ್ನು ಸರ್ಕಾರ ರಚಿಸಿತ್ತು. ಈ ತಂಡದಲ್ಲಿ ಎಎಸ್ಪಿ ವೆಂಕಟೇಶ್ ಪ್ರಸನ್ನ ಅವರ ಹೆಸರು ಇತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬೆಳವಣಿಗೆ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರರು ಮತ್ತು ಸೌಜನ್ಯ ಕುಟುಂಬದವರು ಎಸ್‌ಐಟಿ ತಂಡದಲ್ಲಿ ವಿವಾದಿತ ಅಧಿಕಾರಿಗಳು ಇದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಎಎಸ್ ಪಿ ವೆಂಕಟೇಶ್ ಪ್ರಸನ್ನ ಅವರ ಮೇಲೆ ಭ್ರಷ್ಟಾಚಾರ ಮತ್ತು ಭೂಗತ ಪಾತಕಿಗಳ ಜೊತೆ ನಂಟು ಹೊಂದಿರುವ ಗಂಭೀರ ಆರೋಪಗಳಿದ್ದು, ಅವರನ್ನು ತಂಡದಿಂದ ಕೈಬಿಡುವಂತೆ ಒತ್ತಾಯಿಸಿದ್ದರು. ಈ ಆಕ್ಷೇಪಗಳ ಹಿನ್ನೆಲೆಯಲ್ಲಿ ಮುಜುಗರಕ್ಕೊಳಗಾದ ಎಎಸ್ ಪಿ ವೆಂಕಟೇಶ್ ಪ್ರಸನ್ನ, ತನಿಖಾ ತಂಡದಿಂದ ಹಿಂದೆ ಸರಿಯಲು ನಿರ್ಧರಿಸಿ ತಮ್ಮನ್ನು ತನಿಖಾ ತಂಡದಿಂದ ಕೈಬಿಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಮಂಗಳೂರು MRPL ನಲ್ಲಿ ಭೀಕರ ಸ್ಫೋಟ: ಹೊತ್ತಿ ಉರಿದ ಕಾರ್ಖಾನೆ: ಮುಗಿಲೆತ್ತರಕ್ಕೆ ವ್ಯಾಪಿಸಿದ ದಟ್ಟ ಹೊಗೆ

ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ ಲಿಮಿಟೆಡ್ (MRPL) ನಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಕಾರ್ಖಾನೆ ಬೆಂಕಿಯಲ್ಲಿ ಧಗ ಧಗನೆ ಹೊತ್ತಿ ಉರಿಯುತ್ತಿದೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮಂಗಳೂರಿನ ಜೋಕಟ್ಟೆ ಬಳಿ ಇರುವ ಎಂಆರ್‌‌ಪಿಎಲ್ ಘಟಕದಲ್ಲಿ ಇಂದು ಮಧ್ಯಾಹ್ನ 12:30ರ ಸುಮಾರಿಗೆ ಭಾರೀ ಸ್ಪೋಟದ ಶಬ್ದ ಕೇಳಿಬಂದಿದ್ದು, ಸ್ಫೋಟದ ಬೆನ್ನಲ್ಲೇ ಕಾರ್ಖಾನೆ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದು, ಮುಗಿಲೆತ್ತರಕ್ಕೆ ದಟ್ಟ ಹೊಗೆ ಆವರಿಸಿದೆ.

ಸ್ಫೋಟದ ರಭಸಕ್ಕೆ ಪಕ್ಕದಲ್ಲಿರುವ ಅಂಗನವಾಡಿ, ಗ್ರಾಮ ಪಂಚಾಯತ್ ಕಚೇರಿಯ ಕಿಟಕಿಗಳ ಗಾಜುಗಳು ಪುಡಿ ಪುಡಿಯಾಗಿವೆ. ಹಲವು ಮನೆಗಳಿಗೂ ಹಾನಿಯಾಗಿವೆ. ಎಂಆರ್‌‌ಪಿಎಲ್ ತೈಲ ಘಟಕದಲ್ಲಿ ಸ್ಫೋಟ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಆಂಬುಲೆನ್ಸ್ ಗಳು ದೌಡಾಯಿಸಿವೆ.

ಸ್ಥಳೀಯರಲ್ಲಿ ಆತಂಕವುಂಟಾಗಿದ್ದು, ಪೊಲೀಸರು ಹಾಗೂ ಅಧಿಕಾರಿಗಳು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಸ್ಪೋಟದ ಬೆನ್ನಲ್ಲೇ ಸುತ್ತಮುತ್ತಲಿನ ಪ್ರದೇಶಗಳಿಗೆ ದಟ್ಟ ಹೊಗೆ ಆವರಿಸಿದ್ದು, ಘಟಕದಲ್ಲಿ ದೊಡ್ಡ ಮಟ್ಟದ ದುರಂತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular