HomeKarnatakaBIG NEWS: ಬುದ್ಧಿವಾದ ಹೇಳಿದ್ದಕ್ಕೆ ASI ಸ್ಕೂಟರ್ ಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

BIG NEWS: ಬುದ್ಧಿವಾದ ಹೇಳಿದ್ದಕ್ಕೆ ASI ಸ್ಕೂಟರ್ ಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

ಚಿಕ್ಕಬಳ್ಳಾಪುರ: ಬುದ್ಧಿ ಹೇಳಿದ್ದಕ್ಕೆ ಎಎಸ್ ಐ ಸ್ಕೂಟರ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಿವೇಕಾನಂದ ನಗರದಲ್ಲಿ ನಡೆದಿದೆ.

ಗುಡಿಬಂಡೆ ಪೊಲೀಸ್ ಠಾಣೆಯ ಎಎಸ್ ಐ ನಂಜುಂಡ ಶರ್ಮ ಎಂಬುವವರಿಗೆ ಸೇರಿದ ಸ್ಕೂಟರ್ ಗೆ ಸಲೀಂ ಎಂಬಾತ ಬೆಂಕಿ ಹಚ್ಚಿದ್ದಾನೆ. ಅಣ್ಣ – ತಮ್ಮ ಇಬ್ಬರೂ ಗಲಾಟೆ ಮಾಡಿಕೊಂಡು ಆಸ್ಪತ್ರೆ ಸೇರಿದ್ದರು. ಈ ಸಂಬಂಧ ಎಎಸ್ ಐ ನಂಜುಂಡ ಶರ್ಮ ಆಸ್ಪತ್ರೆಗೆ ತೆರಳಿ ಇಬ್ಬರಿಗೂ ಬುದ್ಧಿ ಹೇಳಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡು ಸಲೀಂ, ನಂಜುಂಡ ಶರ್ಮ ಅವರ ನಿವಾಸಕ್ಕೆ ತೆರಳಿ, ಅವರ ಸ್ಕೂಟರ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular