HomeLatest NewsBIG NEWS: ಅರುಣಾಚಲ ಪ್ರದೇಶದ ಸ್ಥಳಗಳಿಗೆ ಮರುನಾಮಕರಣ ಮಾಡುವ ಚೀನಾ ಯತ್ನಕ್ಕೆ ಖಡಕ್ ತಿರುಗೇಟು ನೀಡಿದ...

BIG NEWS: ಅರುಣಾಚಲ ಪ್ರದೇಶದ ಸ್ಥಳಗಳಿಗೆ ಮರುನಾಮಕರಣ ಮಾಡುವ ಚೀನಾ ಯತ್ನಕ್ಕೆ ಖಡಕ್ ತಿರುಗೇಟು ನೀಡಿದ ಭಾರತ

ನವದೆಹಲಿ: ಅರುಣಾಚಲ ಪ್ರದೇಶದ ಕೆಲ ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡಲು ಮುಂದಾದ ಪ್ರಯತ್ನಕ್ಕೆ ಭಾರತ ಖಡಕ್ ತಿರುಗೇಟು ನೀಡಿದೆ.

ಚೀನಾ ಪ್ರಯತ್ನವನ್ನು ತಿರಸ್ಕರಿಸಿರುವ ಭಾರತ, ಅರುಣಾಚಲ ಪ್ರದೇಶ ಯಾವತ್ತೂ ಭಾರತದ ಅವಿಭಾಜ್ಯ ಅಂಗ. ಚೀನಾ ವ್ಯರ್ಥ ಪ್ರಯತ್ನಕ್ಕೆ ಮುಂದಾದರೆ ಸುಮ್ಮನಿರಲ್ಲ ಎಂದು ತಕ್ಕ ಉತ್ತರ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಚೀನಾ ಯತ್ನಗಳು ನಮ್ಮ ಗಮನಕ್ಕೆ ಬಂದಿವೆ. ಅರುಣಾಚಲ ಪ್ರದೇಶ ಭಾರತದ ರಾಜ್ಯ. ಚೀನಾದ ನಿಷ್ಪ್ರಯೋಜಕ, ಅಸಂಬದ್ಧ, ಅವಿವೇಕತನದ ಪ್ರಯತ್ನಗಳು ಸಫಲವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಅರುಣಾಚಲ ಪ್ರದೇಶ ಎಂದಿಗೂ ಭಾರತದ ಅವಿಭಾಜ್ಯ ಹಾಗೂ ಬೇರ್ಪಡಿಸಲಗದ ಭಾಗವಾಗಿದೆ. ವಾಸ್ತವವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular