HomeLatest Newsಸಂಜೆ ಸ್ನ್ಯಾಕ್ಸ್ ಗೆ ಬೆಸ್ಟ್ ಆಯ್ಕೆ: ಹೀಗೆ ಮಾಡಿ ನೋಡಿ ಖಾರ ಖಾರವಾದ ‘ಪನ್ನೀರ್ ಫ್ರೈಡ್...

ಸಂಜೆ ಸ್ನ್ಯಾಕ್ಸ್ ಗೆ ಬೆಸ್ಟ್ ಆಯ್ಕೆ: ಹೀಗೆ ಮಾಡಿ ನೋಡಿ ಖಾರ ಖಾರವಾದ ‘ಪನ್ನೀರ್ ಫ್ರೈಡ್ ರೈಸ್’

ಮನೆಯಲ್ಲಿ ಪ್ರತಿದಿನ ಒಂದೇ ರೀತಿಯ ಅಡುಗೆ ತಿಂದು ಬೇಸರವಾಗಿದ್ದರೆ ಅಥವಾ ಸಂಜೆ ವೇಳೆಗೆ ತಟ್ಟನೆ ಏನಾದರೂ ಸ್ಪೆಷಲ್ ಹಾಗೂ ರುಚಿಕರವಾದ ತಿಂಡಿ ಸೇವಿಸಬೇಕು ಅನಿಸಿದರೆ ಪನ್ನೀರ್ ಫ್ರೈಡ್ ರೈಸ್ ಸೂಕ್ತ ಆಯ್ಕೆ. ಮಕ್ಕಳು ಮತ್ತು ಹಿರಿಯರು ಇಷ್ಟಪಟ್ಟು ತಿನ್ನುವ ಈ ಖಾದ್ಯವನ್ನು ರೆಸ್ಟೋರೆಂಟ್ ಶೈಲಿಯಲ್ಲಿ ಅತ್ಯಂತ ಸುಲಭವಾಗಿ ಮನೆಯಲ್ಲೇ ಸಿದ್ಧಪಡಿಸಿಕೊಳ್ಳಬಹುದು.

ಬೇಕಾಗುವ ಸಾಮಗ್ರಿಗಳು

ಅನ್ನ, ಪನ್ನೀರ್ ತುಂಡುಗಳು, ಇಂಜಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಕಾಳುಮೆಣಸಿನ ಪುಡಿ, ಸೋಯಾ ಸಾಸ್, ರುಚಿಗೆ ತಕ್ಕಷ್ಟು ಉಪ್ಪು, ಈರುಳ್ಳಿ, ಕ್ಯಾರೇಟ್, ಕ್ಯಾಪ್ಸಿಕಂ ಹಾಗೂ ಅಣಬೆ (ಮಶ್ರೂಮ್).

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಯಾರಿಸುವ ವಿಧಾನ

ಮೊದಲು ಪನ್ನೀರ್ ತುಂಡುಗಳಿಗೆ ಸ್ವಲ್ಪ ಕಾರ್ನ್ ಫ್ಲೋರ್ ಬೆರೆಸಿ ಎಣ್ಣೆಯಲ್ಲಿ ಗರಿಗರಿಯಾಗುವಂತೆ ಹುರಿದುಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಇಂಜಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಅದಕ್ಕೆ ಹುರಿದಿಟ್ಟ ಪನ್ನೀರ್ ಸೇರಿಸಿ ಸ್ವಲ್ಪ ಸಮಯ ಬಾಡಿಸಿ.

ಬಳಿಕ ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ, ಕ್ಯಾರೇಟ್, ಕ್ಯಾಪ್ಸಿಕಂ ಮತ್ತು ಅಣಬೆ ಹಾಕಿ ಚೆನ್ನಾಗಿ ರೋಸ್ಟ್ ಮಾಡಿ. ಈಗ ಖಾರದ ಪುಡಿ, ಕಾಳುಮೆಣಸಿನ ಪುಡಿ, ಸೋಯಾ ಸಾಸ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.

ಕೊನೆಯಲ್ಲಿ ಮೊದಲೇ ಬೇಯಿಸಿಟ್ಟುಕೊಂಡ ಅನ್ನವನ್ನು ಇದಕ್ಕೆ ಸೇರಿಸಿ, ಎಲ್ಲ ಮಸಾಲೆಗಳು ಅನ್ನಕ್ಕೆ ಸರಿಯಾಗಿ ಹಿಡಿಯುವಂತೆ ತಿರುಗಿಸಿ ಇಳಿಸಿದರೆ ಬಿಸಿಬಿಸಿಯಾದ ರುಚಿಕರ ಪನ್ನೀರ್ ಫ್ರೈಡ್ ರೈಸ್ ಸಿದ್ಧ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular