HomeIndia60 ಸಾವಿರ ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಅಧಿಕಾರಿ, ತನಿಖೆ ಕೈಗೊಂಡಾಗ ಒಟ್ಟು ಆಸ್ತಿ 10...

60 ಸಾವಿರ ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಅಧಿಕಾರಿ, ತನಿಖೆ ಕೈಗೊಂಡಾಗ ಒಟ್ಟು ಆಸ್ತಿ 10 ಕೋಟಿಗೂ ಅಧಿಕ

ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಡಿಸೆಂಬರ್ 5, 2025ರಲ್ಲಿ 60,000 ರೂ. ಲಂಚ ಸ್ವೀಕಾರ ಮಾಡುವಾಗ ಅಧಿಕಾರಿಯನ್ನು ರೆಡ್ ಹ್ಯಾಡ್ ಆಗಿ ಹಿಡಿದಿದ್ದರು. ಆದರೆ ಪ್ರಕರಣದ ತನಿಖೆ ಕೈಗೊಂಡು, ಹಲವು ಕಡೆಗಳಲ್ಲಿ ದಾಳಿ ನಡೆಸಿದಾಗ ಅಧಿಕಾರಿ ಆಸ್ತಿ ಬರೋಬ್ಬರಿ 10 ಕೋಟಿ ರೂ.ಗೂ ಅಧಿಕ ಎಂದು ತಿಳಿದುಬಂದಿದೆ.

ಈ ಸರ್ಕಾರಿ ಅಧಿಕಾರಿ ಹೆಸರು ಅರಮಾಡ ವೆಂಕಟ ರೆಡ್ಡಿ. ಹನುಮಕೊಂಡ ಜಿಲ್ಲೆಯ ಹೆಚ್ಚುವರಿ ಕಲೆಕ್ಟರ್ (ಕಂದಾಯ) ಮತ್ತು ತೆಲಂಗಾಣ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ.

ಡಿಸೆಂಬರ್ 5ರಂದು ಕ್ರಿಯೇಟೀವ್ ಮಾಡೆಲ್ ಸ್ಕೂಲ್ ಎಂಬ ಶಾಲೆಯ ನವೀಕರಣಕ್ಕೆ 60,000 ರೂ. ಲಂಚ ಸ್ವೀಕಾರ ಮಾಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದರು. ಈ ದಾಳಿ ಬಳಿಕ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತನಿಖೆ ಮುಂದುವರೆಸಿದ ಎಸಿಬಿ: ಅರಮಾಡ ವೆಂಕಟ ರೆಡ್ಡಿ ವಿರುದ್ಧ ಹಲವು ಆರೋಪಗಳು ಕೇಳಿ ಬಂದವು. ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದಿಸಿದ್ದಾರೆ ಎಂಬ ದೂರುಗಳು ಬಂದವು. ಆದ್ದರಿಂದ ಎಸಿಬಿ 60,000 ರೂ. ಲಂಚ ಪ್ರಕರಣದ ಜೊತೆ ಅಕ್ರಮ ಆಸ್ತಿಯ ಕುರಿತು ತನಿಖೆ ಕೈಗೊಂಡರು.

ತನಿಖೆಯ ಭಾಗವಾಗಿ ಜನವರಿ 21ರಂದು ಎಸಿಬಿ ಪೊಲೀಸರು ಅರಮಾಡ ವೆಂಕಟ ರೆಡ್ಡಿ ನಿವಾಸ, ಆಪ್ತರ ನಿವಾಸಗಳ ಮೇಲೆ ದಾಳಿ ಮಾಡಿದ್ದಾರೆ. ಆಗ ಅರಮಾಡ ವೆಂಕಟ ರೆಡ್ಡಿ ಮನೆಯಲ್ಲಿ 30 ಲಕ್ಷ ರೂ. ಹಣ ಸಿಕ್ಕಿದೆ.

ಇದುವರೆಗೂ ಎಸಿಬಿ ಅಧಿಕಾರಿಗಳು ದಾಖಲೆ ಇಲ್ಲದ 30 ಲಕ್ಷ ಹಣ, 2 ಕೆಜಿ ಚಿನ್ನ, ಬ್ಯಾಂಕ್ ಲಾಕರ್‌ನಲ್ಲಿ 42 ಲಕ್ಷ ರೂ. ಹಣ, ಎಲ್‌ಬಿ ನಗರದಲ್ಲಿ ಐಷಾರಾಮಿ ಬಂಗಲೆ, 10 ಫ್ಲಾಟ್‌ಗಳ ದಾಖಲೆ ಪತ್ತೆ ಹಚ್ಚಿದ್ದಾರೆ. ಇವುಗಳ ಒಟ್ಟಾರೆ ಮೌಲ್ಯ 10 ಕೋಟಿ ರೂ.ಗೂ ಅಧಿಕವಾಗಿದೆ.

ಆದ್ದರಿಂದ ಕಳೆದ ತಿಂಗಳ 60,000 ರೂಪಾಯಿ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಪ್ರಕರಣ ಈಗ ಮಹತ್ವದ ತಿರುವು ಪಡೆದಿದೆ. ಈಗ ಎಸಿಬಿ ಅಧಿಕಾರಿಯ ಕುರಿತು ಸಮಗ್ರ ತನಿಖೆಗೆ ಮುಂದಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ಅರಮಾಡ ವೆಂಕಟ ರೆಡ್ಡಿ ಜೊತೆ ಕೆಲಸ ಮಾಡುತ್ತಿದ್ದ ಇತರ ಇಬ್ಬರು ಉದ್ಯೋಗಿಗಳನ್ನು ವಶಕ್ಕೆ ಪಡೆದಿದ್ದಾರೆ. ಎಸಿಬಿ ಅಧಿಕಾರಿಗಳು ಆರೋಪಿಗಳ ಬಳಿ ಇರುವ ದಾಖಲೆಗಳನ್ನು ಪರಿಶೀಲಿಸುತ್ತಿರುವುದರಿಂದ ತನಿಖೆ ಇನ್ನೂ ಸಹ ಪೂರ್ಣಗೊಂಡಿಲ್ಲ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular