ಮುಂಬೈ: ಕ್ರಿಕೆಟ್ ಲೋಕದ ಜೂನಿಯರ್ ಮಾಸ್ಟರ್ ಬ್ಲಾಸ್ಟರ್ ಅರ್ಜುನ್ ತೆಂಡೂಲ್ಕರ್ ಇಂದು ತಮ್ಮ ಬಾಲ್ಯದ ಗೆಳತಿ, ಉದ್ಯಮಿ ಸಾನಿಯಾ ಚಾಂದೋಕ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಆಗಸ್ಟ್ನಲ್ಲಿ ಗುಟ್ಟಾಗಿ ನಡೆದಿದ್ದ ನಿಶ್ಚಿತಾರ್ಥದ ನಂತರ ಇಂದು ಮುಂಬೈನಲ್ಲಿ ನಡೆದ ಈ ಮದುವೆ ಸಮಾರಂಭ ವರ್ಷದ ವಿವಾಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ
ಮುಂಬೈನ ಪ್ರತಿಷ್ಠಿತ ಸೇಂಟ್ ರೆಗಿಸ್ (St Regis) ಹೋಟೆಲ್ನಲ್ಲಿ ನಡೆದ ಈ ಅದ್ಧೂರಿ ಸಮಾರಂಭಕ್ಕೆ ದೇಶದ ಘಟಾನುಘಟಿ ಗಣ್ಯರು ಸಾಕ್ಷಿಯಾದರು,ವಿವಾಹದ ಅತ್ಯಂತ ಸುಂದರ ಕ್ಷಣವೆಂದರೆ ಅದು ವರಮಾಲೆ ಬದಲಾಯಿಸುವ ಸಮಯ. ಅರ್ಜುನ್ ಮತ್ತು ಸಾನಿಯಾ ಪರಸ್ಪರ ಹಾರ ಬದಲಾಯಿಸಿಕೊಂಡು ಪ್ರೀತಿಯಿಂದ ಅಪ್ಪಿಕೊಂಡರು. ಈ ಸುಂದರ ದೃಶ್ಯವನ್ನು ನೋಡುತ್ತಿದ್ದ ತಂದೆ ಸಚಿನ್ ಮತ್ತು ತಾಯಿ ಅಂಜಲಿ ತೆಂಡೂಲ್ಕರ್ ಕಣ್ಣಾಲಿಗಳು ಆನಂದ ಭಾಷ್ಪದಿಂದ ತೇವವಾಗಿದ್ದವು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ
ಮದುವೆಯಲ್ಲಿ ಗಣ್ಯರ ಉಪಸ್ಥಿತಿ
ಕ್ರಿಕೆಟ್ ಲೋಕದಿಂದ ಹಿಡಿದು ಬಾಲಿವುಡ್ ಮತ್ತು ಉದ್ಯಮ ರಂಗದ ದಿಗ್ಗಜರು ಈ ಮದುವೆಗೆ ಆಗಮಿಸಿದ್ದರು:ಕ್ರಿಕೆಟ್ ತಾರೆ ಮಹೇಂದ್ರ ಸಿಂಗ್ ಧೋನಿ-ಸಾಕ್ಷಿ ದಂಪತಿ, ಯುವರಾಜ್ ಸಿಂಗ್ ಮತ್ತು ಹೇಜಲ್ ಕೀಚ್ ಆಗಮಿಸಿ ನವಜೋಡಿಗೆ ಹಾರೈಸಿದರು.ಯುವರಾಜ್ ಸಿಂಗ್, ಜಹೀರ್ ಖಾನ್, ಅಜಿತ್ ಅಗರ್ಕರ್ ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್ ಜೋಡಿಯ ಸಂಭ್ರಮಕ್ಕೆ ಸಾಕ್ಷಿಯಾದರು
ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರೊಂದಿಗೆ ಆಕಾಶ್ ಮತ್ತು ಶ್ಲೋಕಾ ಅಂಬಾನಿ ಕೂಡ ಸಮಾರಂಭದಲ್ಲಿ ಮಿಂಚಿದರು
ಸಚಿನ್ ಅವರ ಆಹ್ವಾನದ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ರಾಹುಲ್ ಗಾಂಧಿ ಅವರಿಗೂ ಆಮಂತ್ರಣ ನೀಡಲಾಗಿತ್ತು. ಅಂಬಾನಿ ಕುಟುಂಬ ಸೇರಿದಂತೆ ದೇಶದ ಪ್ರಮುಖ ಉದ್ಯಮಿಗಳು ಮದುವೆಯನ್ನು ಇನ್ನಷ್ಟು ರಂಗೇರಿಸಿದರು
ಬಿಗ್ ಬಿ ಅಮಿತಾಬ್ ಬಚ್ಚನ್ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರೆ, ಜಯಾ ಬಚ್ಚನ್ ಐವರಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದರು. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಕೂಡ ರೆಡ್ ಕಾರ್ಪೆಟ್ ಮೇಲೆ ಒಟ್ಟಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು
ಸಾನಿಯಾ ಚಾಂದೋಕ್ ಮುಂಬೈನ ಖ್ಯಾತ ಕೈಗಾರಿಕೋದ್ಯಮಿ ರವಿ ಘಾಯ್ ಅವರ ಮೊಮ್ಮಗಳು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಪದವಿ ಪಡೆದಿದ್ದಾರೆ ಮಿಸ್ಟರ್ ಪಾವ್ಸ್ ಪೆಟ್ ಸ್ಪಾ & ಸ್ಟೋರ್’ (Mr. Paws Pet Spa & Store) ನಿರ್ದೇಶಕಿ ಮತ್ತು ಪಾಲುದಾರರಾಗಿದ್ದಾರೆ.

