HomeBeautyಆರೋಗ್ಯಕರ ಕೂದಲು ಪಡೆಯಲು ಹಚ್ಚಿ 'ಪಪ್ಪಾಯ' ಹೇರ್ ಮಾಸ್ಕ್

ಆರೋಗ್ಯಕರ ಕೂದಲು ಪಡೆಯಲು ಹಚ್ಚಿ ‘ಪಪ್ಪಾಯ’ ಹೇರ್ ಮಾಸ್ಕ್

ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಚರ್ಮದ ಸೌಂದರ್ಯ ವೃದ್ಧಿಸಲು ಕೂಡ ಬಳಸುತ್ತಾರೆ. ಇದರಿಂದ ಹಲವು ಬಗೆಯ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚುತ್ತಾರೆ. ಅದೇ ರೀತಿ ಇದರಿಂದ ಹೇರ್ ಮಾಸ್ಕ್ ತಯಾರಿಸಿ ಕೂದಲಿಗೆ ಹಚ್ಚುವುದರಿಂದ ಕೂದಲಿನ ಸೌಂದರ್ಯ ಕೂಡ ಕಾಪಾಡಬಹುದು.

*1 ಕಪ್ ಮೊಸರು, ½ ಪಪ್ಪಾಯಿ, 1 ಚಮಚ ನಿಂಬೆ ರಸ ಇವಿಷ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ 50 ನಿಮಿಷ ಬಿಟ್ಟು ಕೂದಲನ್ನು ಶಾಂಪೂವಿನಿಂದ ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಮಾಡಿ.

*1 ಹಣ್ಣಾದ ಪಪ್ಪಾಯಿಯ ತಿರುಳಿಗೆ 2 ಚಮಚ ತೆಂಗಿನೆಣ್ಣೆ, 1 ಚಮಚ ತೆಂಗಿನ ಹಾಲು, ನಿಂಬೆ ರಸ ಸೇರಿಸಿ ಪೇಸ್ಟ್ ತಯಾರಿಸಿ ನೆತ್ತಿಗೆ ಹಚ್ಚಿ 10 ನಿಮಿಷ ಮಸಾಜ್ ಮಾಡಿ 40 ನಿಮಿಷ ಬಿಟ್ಟು ಶಾಂಪೂವಿನಿಂದ ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular