HomeBeautyಕೂದಲು ತುಂಡಾಗುವುದನ್ನು ತಡೆಯಲು ಇದನ್ನು ಹಚ್ಚಿ

ಕೂದಲು ತುಂಡಾಗುವುದನ್ನು ತಡೆಯಲು ಇದನ್ನು ಹಚ್ಚಿ

ಕೂದಲು ಸರಿಯಾಗಿ ಬೆಳವಣಿಗೆ ಆಗದೆ ಸಮಸ್ಯೆ ಅನುಭವಿಸುತ್ತಿರುವ ಮಹಿಳೆಯರು ಹಲವರಿದ್ದಾರೆ. ಆದರೆ ಕೆಲವು ಮಹಿಳೆಯರಿಗೆ ಕೂದಲು ಬೆಳೆಯುತ್ತಿದ್ದರೂ ಉದ್ದವಾಗಿ ಬೆಳೆಯದೆ ಅರ್ಧದಲ್ಲೇ ತುಂಡಾಗುತ್ತದೆ. ಹಾಗಾಗಿ ಕೂದಲು ಉದ್ದವಾಗಿ ಬಲಿಷ್ಠವಾಗಿ ಬೆಳೆಯಲು ಈ ಮನೆಮದ್ದನ್ನು ಬಳಸಿ.

*4 ಚಮಚ ಆಲಿವ್ ಆಯಿಲ್ ಗೆ 1 ಚಮಚ ಆಪಲ್ ಸೈಡರ್ ವಿನೆಗರ್ ಮಿಶ್ರಣ ಮಾಡಿ ಅದನ್ನು ನೆತ್ತಿಗೆ ಹಚ್ಚಿ 5 ನಿಮಿಷ ನಿಧಾನವಾಗಿ ಮಸಾಜ್ ಮಾಡಿ. ಒಂದು ಗಂಟೆ ಬಿಟ್ಟು ಸ್ನಾನ ಮಾಡಿ. ಇದರಿಂದ ಕೂದಲು ಬೇಗನೆ ಬೆಳೆಯುತ್ತದೆ.

ಹಸಿ ಹಾಲಿನಲ್ಲಿದೆ ಸೌಂದರ್ಯದ ಗುಟ್ಟು

*ಕೂದಲು ಸರಿಯಾಗಿ ಬೆಳೆಯದಿರಲು ಪೌಷ್ಟಿಕಾಂಶದ ಕೊರತೆಯು ಕಾರಣವಾಗುತ್ತದೆ. ಕೂದಲ ಬೆಳವಣಿಗೆಗೆ ಪ್ರೋಟೀನ್ ಅಗತ್ಯವಾಗಿ ಬೇಕು. ಹಾಗಾಗಿ 1 ಕಪ್ ಮೊಸರಿಗೆ, 1 ಚಮಚ ಆಪಲ್ ಸೈಡರ್ ವಿನೆಗರ್, ಮತ್ತು 1 ಚಮಚ ಜೇನುತುಪ್ಪ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ 15 ನಿಮಿಷ ಬಿಟ್ಟು ಕೂದಲನ್ನು ಸ್ವಚ್ಚಗೊಳಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular