HomeKarnatakaBREAKING : ಸಾರಿಗೆ ನೌಕರರ ವರ್ಗಾವಣೆಗೆ ಅರ್ಜಿ ಸಲ್ಲಿಕೆ ದಿನಾಂಕ ಸೆ.30 ರವರೆಗೆ ವಿಸ್ತರಣೆ :...

BREAKING : ಸಾರಿಗೆ ನೌಕರರ ವರ್ಗಾವಣೆಗೆ ಅರ್ಜಿ ಸಲ್ಲಿಕೆ ದಿನಾಂಕ ಸೆ.30 ರವರೆಗೆ ವಿಸ್ತರಣೆ : ‘KSRTC’ ಆದೇಶ

ಬೆಂಗಳೂರು :ಸಾರಿಗೆ ನೌಕರರ ಹಿತದೃಷ್ಟಿಯಿಂದ ಸಾಮಾನ್ಯ ಮತ್ತು ಪರಸ್ಪರ ವರ್ಗಾವಣೆಗೆ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ:30-09-2023 ರ ಸಂಜೆ 5:30 ರವರೆಗೆ ವಿಸ್ತರಿಸಿ ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕರು ಸುತ್ತೋಲೆ ಹೊರಡಿಸಿದ್ದಾರೆ.

2023ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ ದಿನಾಂಕ: 05-07-2023 ರ ಬೆಳಿಗ್ಗೆ 11:00 ಗಂಟೆಯಿಂದ ಪ್ರಾರಂಭವಾಗಿದ್ದು, ದಿನಾಂಕ:18-08-2023 ರ ಸಂಜೆ 5:30 ರವರೆಗೆ ಆನ್-ಲೈನ್ ಮೂಲಕ www.ksrtc.org/transfer ರಲ್ಲಿ ಸಾಮಾನ್ಯ ಮತ್ತು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.

ಪ್ರಸ್ತುತ, ನೌಕರರ ಹಿತದೃಷ್ಟಿಯಿಂದ ಸಾಮಾನ್ಯ ಮತ್ತು ಪರಸ್ಪರ ವರ್ಗಾವಣೆಗೆ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ:30-09-2023 ರ ಸಂಜೆ 5:30 ರವರೆಗೆ ವಿಸ್ತರಿಸಿ ಅವಕಾಶ ಕಲ್ಪಿಸಲಾಗಿರುತ್ತದೆ. ನೌಕರರು ಸದರಿ ಸೌಲಭ್ಯದ ಸದುಪಯೋಗವನ್ನು ಪಡೆಯಲು ತಿಳಿಸಲಾಗಿದೆ. ಸದರಿ ವಿಷಯವನ್ನು ನೌಕರರ ಗಮನಕ್ಕೆ ತರಲು ಹಾಗೂ ಕೇಂದ್ರ ಕಛೇರಿ/ವಿಭಾಗ/ಘಟಕದ ತರಬೇತಿ ಕೇಂದ್ರ/ಕಾರ್ಯಾಗಾರಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲು ಕೋರಲಾಗಿದೆ ಎಂದು ಸುತ್ತೋಲೆ ಹೊರಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular