HomeAgricultureತೋಟಗಾರಿಕೆ ವಿವಿಯ ವಿವಿಧ ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

ತೋಟಗಾರಿಕೆ ವಿವಿಯ ವಿವಿಧ ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

ಶಿವಮೊಗ್ಗ : ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಸರ್ಟಿಫಿಕೇಟ್ ಕೋರ್ಸ್ಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಸುಸ್ಥಿರ ಜೀವನೋಪಾಯಕ್ಕಾಗಿ ಹೈಟೆಕ್ ಅಣಬೆ ಉತ್ಪಾದನಾ ತಂತ್ರಜ್ಞಾನ ತರಬೇತಿಯನ್ನು ಶುಲ್ಕ ರೂ. 4000 ಹಾಗೂ ಬೇಕರಿ ಮತ್ತು ಮಿಠಾಯಿ (ಬಿಸ್ಕತ್ಗಳು ಮತ್ತು ಕೇಕ್ಗಳು) ತರಬೇತಿ ಶುಲ್ಕ ರೂ. 2000 ಗಳಂಎ ದಿನಾಂಕ 22-04-2024 ರಿಂದ 03-05-2024ರ ವರೆಗೆ 10 ದಿನಗಳ ಕೋರ್ಸ್ನ್ನು ಶಿವಮೊಗ್ಗದ ನವುಲೆಯ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಸಲಾಗುವುದು.

ನಿರ್ದಿಷ್ಟಪಡಿಸಿದ ವಿಷಯದ ಮೇಲೆ ಸಾಕ್ಷರತೆ ಮತ್ತು ಕನ್ನಡ ಅಥವಾ ಇಂಗ್ಲೀಷ್ ಜಾನ್ಞವನ್ನು ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಆಸಕ್ತರು ದಿನಾಂಕ 20-04-2024 ರೊಳಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚಿನ ಮಾಹಿತಿಗೆ ವಿಷಯ ನಿರ್ದೇಶಕಿ ಡಾ.ಸುಧಾರಾಣಿ ಎನ್, ಕೃಷಿ ವಿಜ್ಞಾನ ಕೇಂದ್ರ, ಮೊ.ಸಂ: 9482024908 ಸಂಪರ್ಕಿಸಬಹುದೆಂದು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular