HomeIndiaಓಲಾ, ಊಬರ್ ದೇಶವ್ಯಾಪಿ ಮುಷ್ಕರ: ಶನಿವಾರ ಕ್ಯಾಬ್ ಬುಕ್ ಮಾಡುವ ಮುನ್ನ ಎಚ್ಚರ

ಓಲಾ, ಊಬರ್ ದೇಶವ್ಯಾಪಿ ಮುಷ್ಕರ: ಶನಿವಾರ ಕ್ಯಾಬ್ ಬುಕ್ ಮಾಡುವ ಮುನ್ನ ಎಚ್ಚರ

ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ಓಲಾ, ಉಬರ್ ಮತ್ತು ರ‍್ಯಾಪಿಡೋ ಫೆಬ್ರವರಿ 7ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಸುಮಾರು 6 ಗಂಟೆಗಳ ಕಾಲ ಚಾಲಕರು ಆಫ್‌ಲೈನ್ ಆಗಲಿದ್ದು, ಟ್ಯಾಕ್ಸಿ ಸೇವೆ ಮೇಲೆ ಪರಿಣಾಮ ಉಂಟಾಗುವ ನಿರೀಕ್ಷೆ ಇದೆ.

ಕನಿಷ್ಠ ಶುಲ್ಕ, ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೊಳಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಫೆಬ್ರವರಿ 7ರಂದು ಓಲಾ, ಉಬರ್ ಮತ್ತು ರ‍್ಯಾಪಿಡೋ ದೇಶವ್ಯಾಪಿ ಮುಷ್ಕರವನ್ನು ನಡೆಸಲಿವೆ.

ಇದರಿಂದಾಗಿ ಪ್ರಮುಖ ನಗರದಲ್ಲಿ ಶನಿವಾರ ಟ್ಯಾಕ್ಸಿ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ. ಬೈಕ್ ಟ್ಯಾಕ್ಸಿ, ಕ್ಯಾಬ್, ಆಟೋಗಳ ಸಂಚಾರದ ಮೇಲೆ ಈ ಮುಷ್ಕರ ಪರಿಣಾಮ ಬೀರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೆಲಂಗಾಣ ಗಿಗ್ ಕಾರ್ಮಿಕರ ಒಕ್ಕೂಟ ಈ ಮುಷ್ಕರನ್ನು ಮುನ್ನಡೆಸುತ್ತಿದೆ. ದೇಶವ್ಯಾಪಿ ಇರುವ ವಿವಿಧ ಸಂಘಟನೆಗಳ ನೆರವನ್ನು ಒಕ್ಕೂಟ ಕೇಳಿದೆ. ಚಾಲಕರು ಆಫ್‌ಲೈನ್ ಆಗುವ ಮೂಲಕ ಮುಷ್ಕರ ಬೆಂಬಲಿಸಬೇಕು ಎಂದು ಕರೆ ನೀಡಲಾಗಿದೆ.

ಬೇಡಿಕೆಗಳು: ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಾಕಲಾಗಿದ್ದು, ಭಾರತದಾದ್ಯಂತ ಅಪ್ಲಿಕೇಶನ್ ಆಧಾರಿತ ಸಾರಿಗೆ ಕಾರ್ಮಿಕರು ಫೆಬ್ರವರಿ 7ರಂದು ಅಖಿಲ ಭಾರತ ಮಟ್ಟದ ಮುಷ್ಕರವನ್ನು (All India Breakdown) ನಡೆಸಲಿದ್ದಾರೆ. ಕನಿಷ್ಠ ದರವಿಲ್ಲ, ನಿಯಂತ್ರಣವಿಲ್ಲ, ಅಂತ್ಯವಿಲ್ಲದ ಶೋಷಣೆ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಅಗ್ರಿಗೇಟರ್‌ಗಳು ಲಾಭ ಗಳಿಸುತ್ತಿದ್ದರೆ, ಲಕ್ಷಾಂತರ ಅಪ್ಲಿಕೇಶನ್ ಆಧಾರಿತ ಚಾಲಕರು ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ಮೋಟಾರು ವಾಹನ ಅಗ್ರಿಗೇಟರ್ ನಿಯಮ 2025 ಜಾರಿಯಲ್ಲಿದ್ದರೂ ಸಹ ಪ್ಲಾಟ್‌ಫಾರ್ಮ್‌ಗಳು ಇಂದಿಗೂ ನಿರಂಕುಶವಾಗಿ ದರಗಳನ್ನು ನಿಗದಿಪಡಿಸುತ್ತಿವೆ. ನಮ್ಮ ಬೇಡಿಕೆಗಳು ಸ್ಪಷ್ಟವಾಗಿವೆ ಎಂದು ಪೋಸ್ಟ್‌ನಲ್ಲಿ ಹೇಳಿದ್ದು, ಕನಿಷ್ಠ ಮೂಲ ದರಗಳನ್ನು ಅಧಿಕೃತವಾಗಿ ಪ್ರಕಟಿಸಿ ಮತ್ತು ಖಾಸಗಿ ವಾಹನಗಳ ಮಾಲೀಕರು ವಾಣಿಜ್ಯ ಉದ್ದೇಶಕ್ಕೆ ವಾಹನ ಬಳಕೆ ಮಾಡುವುದನ್ನು ನಿಲ್ಲಿಸಿ ಎಂದು ಸರ್ಕಾರದ ಮುಂದೆ ಬೇಡಿಕೆ ಇಡಲಾಗಿದೆ.

ಒಂದು ಕಡೆ ಸರ್ಕಾರದ ‘ಭಾರತ್ ಟ್ಯಾಕ್ಸಿ’ ಸೇವೆ ಪ್ರಾರಂಭವಾಗಿದ್ದು, ಮತ್ತೊಂದು ಕಡೆ ಇವರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಸಹಕಾರ, ಗೃಹ ಸಚಿವ ಅಮಿತ್ ಶಾ ಗುರುವಾರ ಭಾರತ್ ಟ್ಯಾಕ್ಸಿಗೆ ಚಾಲನೆ ನೀಡಿದ್ದಾರೆ. ಇದರ ಸೇವೆ ಶೀಘ್ರದಲ್ಲೇ ದೆಹಲಿ-ಎನ್‌ಸಿಆರ್ ಮತ್ತು ಗುಜರಾತ್‌ನಲ್ಲಿ ಪ್ರಾರಂಭವಾಗಲಿವೆ.

ಭಾರತದ ಮೊದಲ ಸಹಕಾರಿ ಸಂಸ್ಥೆ-ಚಾಲಿತ ರೈಡ್-ಹೇಲಿಂಗ್ ವೇದಿಕೆಯು ಮುಂದಿನ ಮೂರು ವರ್ಷಗಳಲ್ಲಿ ಇಡೀ ದೇಶವನ್ನು ವ್ಯಾಪಿಸಲಿದೆ. ಡೈರಿ ದೈತ್ಯ ಅಮುಲ್  ಸೇರಿದಂತೆ ಎಂಟು ಪ್ರಮುಖ ಸಹಕಾರಿ ಸಂಸ್ಥೆಗಳು ಸೇರಿ ಈ ಭಾರತ್ ಟ್ಯಾಕ್ಸಿ ವೇದಿಕೆಯನ್ನು ಸ್ಥಾಪಿಸಿವೆ.

ಭಾರತ್ ಟ್ಯಾಕ್ಸಿ ಪ್ರಾಯೋಗಿಕ ಕಾರ್ಯಾಚರಣೆಯ ಯಶಸ್ಸನ್ನು ಪ್ರತಿಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದೆ. ಇದು ತಮ್ಮ ಕಮಿಷನ್ ದರವನ್ನು ಕಡಿಮೆ ಮಾಡಿವೆ ಮತ್ತು ಗ್ರಾಹಕರಿಗೆ ಉಚಿತ ಸವಾರಿಗಳಂತಹ ಆಮಿಷಗಳನ್ನು ನೀಡಲು ಪ್ರಾರಂಭಿಸಿವೆ ಎಂದು ಚಾಲಕರು ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೆ, ಹೊಸದಾಗಿ ರೂಪುಗೊಂಡ ಈ ವೇದಿಕೆಯು ಚಾಲಕರಿಗೆ ಮಾಲೀಕತ್ವದ ಹಕ್ಕನ್ನು ನೀಡಬಲ್ಲದು. ಇದನ್ನು ಬೇರೆ ಯಾವುದೇ ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್ ನೀಡಲು ಸಾಧ್ಯವಿಲ್ಲ.

ಭಾರತ್ ಟ್ಯಾಕ್ಸಿ ಮತ್ತು ಓಲಾ, ಉಬರ್ ಮತ್ತು ರ‍್ಯಾಪಿಡೋ ನಡುವಿನ ಜಟಾಪಟಿಯಲ್ಲಿ ಶನಿವಾರ ಮುಷ್ಕರಕ್ಕೆ ಕರೆ ನೀಡಲಾಗಿದೆ. ದೇಶವ್ಯಾಪ್ತಿ ಮುಷ್ಕರದ ಕಾರಣ ಶನಿವಾರ ಕ್ಯಾಬ್ ಬುಕ್ ಮಾಡುವ ಮುನ್ನ ಯೋಚಿಸಿ, ಕೇವಲ ಕ್ಯಾಬ್ ಅವಲಂಬಿಸಿ ಸಂಚಾರ ನಡೆಸಬೇಡಿ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular