HomeKarnatakaಅಗಲಿಕೆ ನೋವಲ್ಲೂ ಪತ್ನಿಯ ಪರಿಸರ ಕಾಳಜಿ ಬಗ್ಗೆ ಪ್ರೀತಿ: ಅಪರ್ಣಾ ಪತಿ ಬರೆದ ಪೋಸ್ಟ್ ಭಾರಿ...

ಅಗಲಿಕೆ ನೋವಲ್ಲೂ ಪತ್ನಿಯ ಪರಿಸರ ಕಾಳಜಿ ಬಗ್ಗೆ ಪ್ರೀತಿ: ಅಪರ್ಣಾ ಪತಿ ಬರೆದ ಪೋಸ್ಟ್ ಭಾರಿ ವೈರಲ್

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅಪರ್ಣಾ ಅವರಿಗೆ ಪರಿಸರದ ಬಗೆಗೆ ಇದ್ದ ಕಾಳಜಿ, ಅವರ ಬದ್ಧತೆಯ ಬಗ್ಗೆ ಅಪರ್ಣಾ ಅವರ ಪತಿ ನಾಗರಾಜ್, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಈ ಒಂದು ಪೋಸ್ಟ್ ಸ್ಪಷ್ಟ ನಿದರ್ಶನ.

ಅಪರ್ಣಾ ಅವರನ್ನು ಅಗಲಿದ ನೋವಿನಲ್ಲಿಯೂ ಅವರಿಗಿದ್ದ ಪರಿಸರದ ಬಗೆಗಿನ ಕಾಳಜಿಯನ್ನು ಕೊನೇಕ್ಷಣದವರೆಗೂ ತಾವು ಕೂಡ ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದಾರೆ. ಅಪರ್ಣಾ ಅಂತಿಮ ದರ್ಶನಕ್ಕೆ ಬರುವವರು ಯಾರೂ ಕೂಡ ಹೂವು-ಹಾರ ತರಬೇಡಿ. ದಯಮಾಡಿ ಬರಿಗೈಯಲ್ಲಿ ಬಂದರೆ ಹೆಚ್ಚು ಚೆನ್ನು. ಎರಡು ಮೂರು ತಾಸಿರುವ ಹೂವು-ಹಾರ ಬಾಡಿದಲ್ಲಿ ಇಷ್ಟು ಕಾಲ ಅವಳು ಕಾಪಿಟ್ಟ ನನ್ನ ಮನೆಮನಸ್ಸುಗಳ ಸುತ್ತಲಿನ ಕಸ ಹೆಚ್ಚೀತು. ಊರಿನ ಅಂದಗೆಟ್ಟೀತು. ಹಾಗಾಗಿ ಕಳಕಳಿಯ ಕೋರಿಕೆ ಎಂದು ಮನಮುಟ್ಟುವಂತೆ ಮನವಿ ಮಾಡಿದ್ದಾರೆ.

ಪತ್ನಿ ನಿಧನದ ನೋವಲ್ಲೂ ಆಕೆಯ ಪರಿಸರ ಪ್ರೇಮದ ಬಗೆಗಿನ ಪತಿ ನಾಗರಾಜ್ ವಸ್ತಾರೆ ಬರೆದುಕೊಂಡಿರುವ ಈ ಪೋಸ್ಟ್ ಸೋಷಿಯಲ್ ಮೀಡಿಯಾಗಳಲ್ಲಿ ಈಗ ಭಾರಿ ವೈರಲ್ ಆಗುತ್ತಿದೆ. ನಾಗರಾಜ್ ವಸ್ತಾರೆ ಮಾಡಿರುವ ಮನವಿಯಲ್ಲಿ ಏನಿದೆ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

”ನಮಸ್ಕಾರ. ನನ್ನ ವೈಯಕ್ತಿಕ ಬದುಕಿನ ಈ ದುರ್ದೈವದ ಹೊತ್ತಿನಲ್ಲಿ ಅಪರ್ಣೆಯನ್ನು ಸ್ಮರಿಸಿರುವ ಎಲ್ಲರಿಗೂ ಋಣಿ. ಅವಳನ್ನು ಕೊನೆಯ ಸಲ ನೋಡಬಯಸುವವರು ಬೆಳಿಗ್ಗೆ ಏಳರಿಂದ ಹನ್ನೆರಡು ಗಂಟೆಯವರೆಗೆ ಬನಶಂಕರಿ ಎರಡನೇ ಹಂತದ ಸುಚಿತ್ರಾ ಫಿಲ್ಮ್ ಸೊಸೈಟಿಯ ಬಳಿಯಿರುವ ಅವಳಿದ್ದ ಮನೆಗೆ ಬರಬಹುದು. ದಯಮಾಡಿ ಬರಿಗೈಯಲ್ಲಿ ಬಂದರೆ ಹೆಚ್ಚು ಚೆನ್ನು. ಎರಡು ಮೂರು ತಾಸಿರುವ ಹೂವು-ಹಾರ ಬಾಡಿದಲ್ಲಿ ಇಷ್ಟು ಕಾಲ ಅವಳು ಕಾಪಿಟ್ಟ ನನ್ನ ಮನೆಮನಸ್ಸುಗಳ ಸುತ್ತಲಿನ ಕಸ ಹೆಚ್ಚೀತು. ಊರಿನ ಅಂದಗೆಟ್ಟೀತು. ಪ್ಲಾಸ್ಟಿಕ್ ಪಾಲಿಥೀನುಗಳಂತೂ ಸುತಾರಾಂ ಬೇಡ. ಈ ನಿಟ್ಟಿನಲ್ಲಿ ಕಳಕಳಿಯ ಕೋರಿಕೆ” ಎಂದು ಬರೆದುಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular