HomeEntertainmentಅನುಷ್ಕಾ ಮದುವೆ ಬಗ್ಗೆ ಕೇಳಿಬಂತು ಬಿಗ್ ಅಪ್‌ಡೇಟ್:ಉದ್ಯಮಿ ಪುತ್ರನ ಜೊತೆ ಹಸೆಮಣೆ ಏರಲಿದ್ದಾರಾ 'ದೇವಸೇನಾ'?

ಅನುಷ್ಕಾ ಮದುವೆ ಬಗ್ಗೆ ಕೇಳಿಬಂತು ಬಿಗ್ ಅಪ್‌ಡೇಟ್:ಉದ್ಯಮಿ ಪುತ್ರನ ಜೊತೆ ಹಸೆಮಣೆ ಏರಲಿದ್ದಾರಾ ‘ದೇವಸೇನಾ’?

ಹೈದರಾಬಾದ್: ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ನಟಿ ಅನುಷ್ಕಾ ಶೆಟ್ಟಿ ಅವರ ಮದುವೆ ಬಗ್ಗೆ ವದಂತಿಗಳು ಹರಡುವುದು ಹೊಸದೇನಲ್ಲ. ಕಳೆದ ಹಲವು ವರ್ಷಗಳಿಂದ ಪ್ರತಿ ಕೆಲವು ತಿಂಗಳಿಗೊಮ್ಮೆ ಅವರ ಮದುವೆ ನಿಶ್ಚಯವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ, ಈ ಬಾರಿಯ ವರದಿಗಳಲ್ಲಿ ಹೆಚ್ಚಿನ ಗಟ್ಟಿತನವಿದ್ದು, ಫಿಲ್ಮ್ ನಗರಿಯಲ್ಲಿ ಬಲವಾದ ಚರ್ಚೆ ನಡೆಯುತ್ತಿದೆ.

ಯಾರು ಆ ಮಿಸ್ಟರಿ ಮ್ಯಾನ್? ಇತ್ತೀಚಿನ ವರದಿಗಳ ಪ್ರಕಾರ, ಅನುಷ್ಕಾ ಶೆಟ್ಟಿ ಅವರು ಖ್ಯಾತ ಉದ್ಯಮಿಯೊಬ್ಬರ ಮಗನೊಂದಿಗೆ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಉದ್ಯಮಿ ಕುಟುಂಬವು ಅನುಷ್ಕಾ ಕುಟುಂಬದೊಂದಿಗೆ ಬಹಳ ಹಳೆಯ ಸ್ನೇಹವನ್ನು ಹೊಂದಿದೆ ಎನ್ನಲಾಗುತ್ತಿದೆ. ಕುಟುಂಬಗಳ ನಡುವೆ ಮಾತುಕತೆ ನಡೆದಿದ್ದು, ಸಂಬಂಧವು ಮದುವೆಯ ಹಂತದವರೆಗೆ ತಲುಪಿದೆ ಎಂಬ ಮಾಹಿತಿಗಳು ಹರಿದಾಡುತ್ತಿವೆ. ಈ ಹಿಂದೆ ಹಲವು ಬಾರಿ ಸಹನಟರ ಜೊತೆ ಹೆಸರು ಕೇಳಿಬಂದಿದ್ದರೂ, ಈ ಬಾರಿ ಮಾತ್ರ ಕುಟುಂಬದ ಆಯ್ಕೆಯ ಉದ್ಯಮಿಯ ಹೆಸರು ಕೇಳಿಬರುತ್ತಿದೆ.

ಸಿನಿಮಾದಿಂದ ದೂರವಿದ್ದಾರಾ ಅನುಷ್ಕಾ? 44 ವರ್ಷದ ಅನುಷ್ಕಾ ಶೆಟ್ಟಿ ಅವರು ‘ಬಾಹುಬಲಿ’ ನಂತರ ಸಿನಿಮಾಗಳ ಆಯ್ಕೆಯಲ್ಲಿ ಬಹಳ ಚೂಟಿಯಾಗಿದ್ದಾರೆ. ಸಾರ್ವಜನಿಕವಾಗಿ ಅಥವಾ ಸಿನಿಮೀಯ ಸಮಾರಂಭಗಳಲ್ಲಿ ಅವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಇತ್ತೀಚೆಗೆ ‘ಘಾಟಿ’ ಸಿನಿಮಾದಲ್ಲಿ ನಟಿಸಿದ್ದರೂ, ಅದರ ಪ್ರಚಾರ ಕಾರ್ಯಕ್ರಮಗಳಿಂದಲೂ ಅವರು ದೂರ ಉಳಿದಿದ್ದರು. ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳಲು ಅವರು ಹಿಂದೇಟು ಹಾಕುತ್ತಿರುವುದು ಮತ್ತು ಹೆಚ್ಚಿನ ಸಮಯವನ್ನು ಕುಟುಂಬದೊಂದಿಗೆ ಕಳೆಯುತ್ತಿರುವುದು ಈ ಮದುವೆಯ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ ಹಲವು ಬಾರಿ ಪತ್ರಕರ್ತರು ಮದುವೆ ಬಗ್ಗೆ ಪ್ರಶ್ನಿಸಿದಾಗ ಅನುಷ್ಕಾ ಅವರು ಯಾವುದನ್ನೂ ಸ್ಪಷ್ಟಪಡಿಸದೆ ನಿಗೂಢತೆ ಕಾಯ್ದುಕೊಂಡಿದ್ದರು. ಆದರೆ ಅವರ ಇತ್ತೀಚಿನ ಜೀವನಶೈಲಿಯನ್ನು ಗಮನಿಸುತ್ತಿರುವ ಅಭಿಮಾನಿಗಳು, ಈ ಬಾರಿ ಅನುಷ್ಕಾ ಖಂಡಿತವಾಗಿಯೂ ಶುಭ ಸುದ್ದಿ ನೀಡಲಿದ್ದಾರೆ ಎಂಬ ಭರವಸೆಯಲ್ಲಿದ್ದಾರೆ. ಸದ್ಯಕ್ಕೆ ಅನುಷ್ಕಾ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲದಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಶುಭಾಶಯಗಳ ಮಹಾಪೂರವೇ ಹರಿಯುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular