ಉಡುಪಿ: ಬಾಲಕಿಯರಿಗೆ ಕ್ಯಾನ್ಸರ್ ಲಸಿಕೆ ಕಡ್ಡಾಯವಲ್ಲ, ಲಸಿಕೆ ಹಾಕಿಸುವುದು ಅವರ ಮನೆಯವರ ತೀರ್ಮಾನವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಬಾರ್ಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲಕಿಯರಿಗೆ ನೀಡಲು ಉದ್ದೇಶಿಸಿರುವ ಕ್ಯಾನ್ಸರ್ ನಿರೋಧಕ ಲಸಿಕೆ ಕಡ್ಡಾಯವಲ್ಲ, ಲಸಿಕೆಯನ್ನು ಹಾಕಬೇಕೆ ಬೇಡವೇ ಎಂಬ ತೀರ್ಮಾನ ಬಾಲಕಿಯರ ಮನೆಯವರದ್ದೇ ಆಗಿರುತ್ತದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಗರ್ಭಕೋಶ ಕ್ಯಾನ್ಸರ್ ನಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದ್ದು, ಇದನ್ನು ತಡೆಯುವ ಉದ್ದೇಶದಿಂದ ಬಾಲಕಿಯರಿಗೆ ಹೆಚ್‌ವಿಪಿ ಲಸಿಕೆ ಹಾಕಲು ಉದ್ದೇಶಿಸಲಾಗಿದೆ. ಆದರೆ ಇದರ ಬಗ್ಗೆ ಜನಸಾಮಾನ್ಯರಲ್ಲಿ ಬೇರೆ ಬೇರೆ ಅಭಿಪ್ರಾಯಗಳಿವೆ. ಆದ್ದರಿಂದ ರಾಜ್ಯದಲ್ಲಿ ಶೇಕಡ 100ರಷ್ಟು ಕಡ್ಡಾಯ ಮಾಡುವುದಿಲ್ಲ. ಬಾಲಕಿಯರಿಗೆ ಹೆಚ್‍ವಿಪಿ ಲಸಿಕೆಯನ್ನು ಹಾಕಬೇಕೆ ಬೇಡವೇ ಎನ್ನುವ ತೀರ್ಮಾನವನ್ನು ಅವರ ಮನೆಯವರೆ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.

