HomeEntertainment'ಅಂಶು' ಚಿತ್ರದ ವಿಡಿಯೋ ಹಾಡು ರಿಲೀಸ್

‘ಅಂಶು’ ಚಿತ್ರದ ವಿಡಿಯೋ ಹಾಡು ರಿಲೀಸ್

ಸಂಚಿತ್ ಹೆಗಡೆ  ಬಳಿಕ ಇದೀಗ ಸ್ಯಾಂಡಲ್ ವುಡ್ ನಲ್ಲಿ ಜಸ್ಕರನ್ ಸಿಂಗ್ ಹವಾ ಕೂಡ ಜೋರಾಗೆ ಇದೆ. ಇದೀಗ ನಿಶಾ ರವಿಕೃಷ್ಣನ್  ಅಭಿನಯದ ಅಂಶು ಚಿತ್ರದ ‘ನೀನು ನಂಬೋ ನಾಳೆ’  ಎಂಬ ಹಾಡಿಗೆ ಧ್ವನಿ ನೀಡಿದ್ದು, ಇಂದು ಆನಂದ್ ಅಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡು ಗಾನಪ್ರಿಯರ ಗಮನ ಸೆಳೆದಿದ್ದು, ಸಾಕಷ್ಟು ಮೆಚ್ಚುಗೆ ಗಳಿಸಿದೆ. ಕೆ ಸಿ ಬಾಲಸಾರಂಗನ್ ಸಂಗೀತ  ಸಂಯೋಜನೆ ನೀಡಿದ್ದು, ಮಹೇಂದ್ರ ಗೌಡ ಅವರ ಸಾಹಿತ್ಯವಿದೆ.

ಎಂಸಿ ಚೆನ್ನಕೇಶವ ನಿರ್ದೇಶನದ ಈ ಚಿತ್ರವನ್ನು ಗ್ರಹಣ LLP ಸಂಸ್ಥೆ ನಿರ್ಮಾಣ ಮಾಡಿದ್ದು, ಅದಿತಿ ನಾರಾಯಣ್ ನೃತ್ಯ ನಿರ್ದೇಶನ, ಎಂ ಸಿ ಚನ್ನಕೇಶವ ಸಂಕಲನ, ಮಹೇಂದ್ರ ಗೌಡ ಸಂಭಾಷಣೆ, ಸುನೀಲ್ ನರಸಿಂಹಮೂರ್ತಿ ಛಾಯಾಗ್ರಹಣವಿದೆ. ಇದೊಂದು ಮಹಿಳಾ ಪ್ರಧಾನ  ಸಿನಿಮಾ ಎಂದು ಹೇಳಲಾಗಿದೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular