HomeEntertainment'ಲವ್ ರೆಡ್ಡಿ' ಚಿತ್ರದ ಮತ್ತೊಂದು ಟ್ರೈಲರ್ ರಿಲೀಸ್

‘ಲವ್ ರೆಡ್ಡಿ’ ಚಿತ್ರದ ಮತ್ತೊಂದು ಟ್ರೈಲರ್ ರಿಲೀಸ್

ಸ್ಮರಣ್ ರೆಡ್ಡಿ ರಚಿಸಿ ನಿರ್ದೇಶಿಸಿರುವ ‘ಲವ್ ರೆಡ್ಡಿ’ ಚಿತ್ರ ನಾಳೆ ಬಿಡುಗಡೆಗೆ ಸಿದ್ಧವಾಗಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ತೆಲುಗು ಭಾಷೆಯಲ್ಲಿ ಭರ್ಜರಿ ಯಶಸ್ಸು ಕಂಡಿರುವ ಈ ಸಿನಿಮಾ ಕನ್ನಡದಲ್ಲೂ ಸೂಪರ್ ಡೂಪರ್ ಹಿಟ್ ಆಗುವ ನಿರೀಕ್ಷೆಯಲ್ಲಿದೆ. ಚಿತ್ರ ತಂಡ ಸೋನಿ ಮ್ಯೂಸಿಕ್ ಸೌತ್ ಯುಟ್ಯೂಬ್ ಚಾನೆಲ್ ನಲ್ಲಿ ಇದರ ಮತ್ತೊಂದು ಟ್ರೈಲರ್ ರಿಲೀಸ್ ಮಾಡಲಾಗಿದೆ.

ಈ ಚಿತ್ರದಲ್ಲಿ ಅಂಜನ್ ರಾಮಚೇಂದ್ರ ಮತ್ತು ಶ್ರಾವಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸುನಂದಾ ಬಿ ರೆಡ್ಡಿ ಸೇರಿದಂತೆ ಹೇಮಲತಾ ರೆಡ್ಡಿ, ರವೀಂದ್ರ ಜಿ, ಮದಗೋಪಾಲ್ ರೆಡ್ಡಿ, ನಾಗರಾಜ್ ಬೀರಪ್ಪ, ಪ್ರಭಂಜನ್ ರೆಡ್ಡಿ, ನವೀನ್ ರೆಡ್ಡಿ ನಿರ್ಮಾಣದ ಜವಾಬ್ದಾರಿಯನ್ನು  ಒತ್ತಿದ್ದಾರೆ. ಪ್ರಿನ್ಸ್ ಹೆನ್ರಿ ಸಂಗೀತ ಸಂಯೋಜನೆ ನೀಡಿದ್ದು, ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ, ಹಾಗೂ ಮಾಸ್ ಮಾದ  ಸಾಹಸ ನಿರ್ದೇಶನ, ಕೆ ಶಿವ ಶಂಕರ ವರ ಪ್ರಸಾದ್, ಮೋಹನ್ ಚಾರಿ ಅಶ್ಕರ್ ಅಲಿ  ಅವರ  ಛಾಯಾಗ್ರಹಣವಿದೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular