HomeEntertainmentರಿಲೀಸ್ ಆಯ್ತು 'ಜಲಂಧರ' ಟ್ರೈಲರ್

ರಿಲೀಸ್ ಆಯ್ತು ‘ಜಲಂಧರ’ ಟ್ರೈಲರ್

ಪ್ರಮೋದ್ ಶೆಟ್ಟಿ ಮತ್ತೊಮ್ಮೆ ನಾಯಕನಾಗಿ ಅಭಿನಯಿಸುತ್ತಿರುವ ‘ಜಲಂಧರ’ ಚಿತ್ರ ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇದರ ಟ್ರೈಲರ್ ನಿನ್ನೆಯಷ್ಟೇ ಜಾನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಟ್ರೈಲರ್ ನೋಡುಗರ ಗಮನ ಸೆಳೆದಿದ್ದು,  ಸಾಕಷ್ಟು ಮೆಚ್ಚುಗೆ ದೊರೆತಿದೆ.

ವಿಷ್ಣು ವಿ ಪ್ರಸನ್ನ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಪ್ರಮೋದ್ ಶೆಟ್ಟಿ, ಲೋಕೇಶ್ ಗೌಡ, ಋಷಿಕಾ ರಾಜ್, ಅರೋಹಿತ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚತಿನ್ ದರ್ಶನ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ವೆಂಕಿ udv ಹಾಗೂ ಸತೀಶ್  ಸಂಕಲನ ಸರಿನ್ ರವೀಂದ್ರನ್,  ಮತ್ತು ವಿದ್ಯಾಶಂಕರ್ ಪಿಎಸ್  ಅವರ ಛಾಯಾಗ್ರಹಣವಿದೆ. ಸ್ಟೆಪಪ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡಿದೆ.

For Latest News Updates, Join Our Whatsapp Community🚩
RELATED ARTICLES

Most Popular