HomeEntertainment'ಗೌರಿ' ಚಿತ್ರದ ಮತ್ತೊಂದು ಹಾಡು ರಿಲೀಸ್

‘ಗೌರಿ’ ಚಿತ್ರದ ಮತ್ತೊಂದು ಹಾಡು ರಿಲೀಸ್

ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಅಭಿನಯದ ಬಹು ನಿರೀಕ್ಷಿತ ‘ಗೌರಿ’ ಚಿತ್ರದ ಧೂಳ್ ಎಬ್ಸಾವ ಎಂಬ  ಹಾಡನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದೆ ಈ ಹಾಡಿಗೆ ಅನಿರುದ್ಧ ಶಾಸ್ತ್ರಿ ಮತ್ತು ಅನನ್ಯ ಭಟ್ ಧ್ವನಿಯಾಗಿದ್ದು, ಶಿವು ಬರ್ಗಿ ಅವರ ಸಂಗೀತ ಮತ್ತು ಸಾಹಿತ್ಯವಿದೆ. ಈ ಹಾಡಿನಲ್ಲಿ ಸಮರ್ಜಿತ್ ಲಂಕೇಶ್ ಜೊತೆ ಸಂಜನಾ ಆನಂದ್ ಸ್ಟೆಪ್ ಹಾಕಿದ್ದಾರೆ.

ಈ ಚಿತ್ರವನ್ನು ಇಂದ್ರಜಿತ್ ಲಂಕೇಶ್ ನಿರ್ದೇಶಿಸುವ ಮೂಲಕ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸಮರ್ಜಿತ್ ಲಂಕೇಶ್ ಅವರಿಗೆ ಜೋಡಿಯಾಗಿ ಸಾನ್ಯಾ ಅಯ್ಯರ್  ಅಭಿನಯಿಸಿದ್ದು, ಮಾನಸಿ ಸುಧೀರ್, ಸಂಪತ್ ಮೈತ್ರಿಯ, ಲೂಸ್ ಮಾದ ಯೋಗಿ, ರಾಜು ಉಳಿದ ಪಾತ್ರವರ್ಗದಲ್ಲಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನ, ಮೋಹನ್ ಭಜರಂಗಿ ನೃತ್ಯ ನಿರ್ದೇಶನ ಹಾಗೂ ರವಿವರ್ಮ ಮತ್ತು   ಡಿಫ್ರೆಂಟ್ ಡ್ಯಾನಿ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular