HomeEntertainment'ರತ್ನ' ಚಿತ್ರದಿಂದ ಬಂತು ಮತ್ತೊಂದು ಗೀತೆ

‘ರತ್ನ’ ಚಿತ್ರದಿಂದ ಬಂತು ಮತ್ತೊಂದು ಗೀತೆ

ಬಸವರಾಜ್ ಬಳ್ಳಾರಿ ನಿರ್ದೇಶನದ ‘ರತ್ನ’ ಚಿತ್ರ ಈಗಾಗಲೇ ತನ್ನ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಚಿತ್ರತಂಡ ಇದೀಗ ಮತ್ತೊಂದು ಹಾಡನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ‘ಬಂಗಾರ ಓ ನನ್ನ ಮುದ್ದು’ ಎಂಬ ಈ ಹಾಡಿಗೆ ಸತೀಶ್ ಬಾಬು ಸಂಗೀತ ಸಂಯೋಜನೆ ನೀಡಿದ್ದು, ನಿರ್ದೇಶಕ ಬಸವರಾಜ್ ಬಳ್ಳಾರಿ ಸಾಹಿತ್ಯವಿದೆ.

ಫ್ಯಾಮಿಲಿ ಎಂಟರ್ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನಿರ್ದೇಶಕ ಬಸವರಾಜ್ ಬಳ್ಳಾರಿ ಅವರೇ ತಮ್ಮ ಬಸವರಾಜ್ ಬಳ್ಳಾರಿ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಹರ್ಷಲಾ ಹನಿ ಮತ್ತು ವರ್ಧನ್ ಪ್ರಮುಖ ಪಾತ್ರದಲ್ಲಿದ್ದಾರೆ. ಸತೀಶ್ ಬಾಬು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular