HomeEntertainment'ಧ್ರುವತಾರೆ' ಚಿತ್ರದಿಂದ ಬಂತು ಮತ್ತೊಂದು ಗೀತೆ

‘ಧ್ರುವತಾರೆ’ ಚಿತ್ರದಿಂದ ಬಂತು ಮತ್ತೊಂದು ಗೀತೆ

ಪ್ರತೀಕ್ ಹಾಗೂ ಮೌಲ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಧ್ರುವತಾರೆ’ ಚಿತ್ರದ ಮತ್ತೊಂದು ಬ್ಯೂಟಿಫುಲ್ ಮೆಲೋಡಿ ಹಾಡು ಇಂದು youtube ನಲ್ಲಿ ಬಿಡುಗಡೆಯಾಗಿದೆ. ‘ಹೂವಿನಂತೆ’ ಎಂಬ ಈ ಹಾಡಿಗೆ ಸೂರಜ್ ಧ್ವನಿ ಆಗುವ ಮೂಲಕ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಪ್ರತೀಕ್ ಅವರ ಸಾಹಿತ್ಯವಿದೆ.

ಪ್ರತೀಕ್ ನಟಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅವರ ಪತ್ನಿ ಮೌಲ್ಯ ಅವರೇ ನಾಯಕಿಯಾಗಿ ಕಾಣಿಸಿಕೊಂಡಿದ್ದು,ಕಾರ್ತಿಕ್ ಮಹೇಶ್, ಅಶ್ವಿನ್ ರಾವ್ ಪಲ್ಲಕ್ಕಿ, ರಮೇಶ್ ಭಟ್, ಮೂಗ್ ಸುರೇಶ್, ಪಿಡಿ ಸತೀಶ್ ಚಂದ್ರ, ಪ್ರಭಾವತಿ, ಸಮಯ್, ಸಂಗೀತ ನಾರಾಯಣ್ ಉಳಿದ  ತಾರಾಂಗಣದಲ್ಲಿದ್ದಾರೆ. ಜಿಪಿ ಫಿಲಂಸ್ ಸಂಸ್ಥೆ ಹಾಗೂ ಶಿವರುದ್ರಪ್ಪ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದು, ಸೂರಜ್ ಜೋಯಿಸ್ ಸಂಗೀತ ಸಂಯೋಜನೆ ನೀಡಿದ್ದಾರೆ, ಪ್ರತೀಕ್ ಅವರ ಸಂಕಲನ ಹಾಗೂ ಸಂಭಾಷಣೆ ಇದ್ದು,ಜೀಚನ್ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular