HomeEntertainmentಶೀಘ್ರದಲ್ಲೇ ಬಿಡುಗಡೆಯಾಗಲಿದೆ 'ಬ್ಯಾಕ್ ಬೆಂಚರ್ಸ್' ಚಿತ್ರದ ಮತ್ತೊಂದು ಹಾಡು

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ಬ್ಯಾಕ್ ಬೆಂಚರ್ಸ್’ ಚಿತ್ರದ ಮತ್ತೊಂದು ಹಾಡು

‘ಬ್ಯಾಕ್ ಬೆಂಚರ್ಸ್’ ಚಿತ್ರದ ಪ್ರಮೋಷನ್ ಹಾಡು ಇತ್ತೀಚಿಗಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಸಕ್ಕತ್ ಸೌಂಡ್ ಮಾಡಿದ್ದು, ಇದೀಗ ಮತ್ತೊಂದು ಹಾಡು ಶೀಘ್ರದಲ್ಲೇ ರಿಲೀಸ್ ಮಾಡುವುದರ ಕುರಿತು ಈ ಸಿನಿಮಾ ನಾಯಕ, ನಾಯಕಿ ವಿಡಿಯೋ ಮೂಲಕ ತಿಳಿಸಿದ್ದಾರೆ.

ರಾಜಶೇಖರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ರಂಜನ್ ನರಸಿಂಹಮೂರ್ತಿ, ಜತಿನ್ ಆರ್ಯನ್, ಆಕಾಶ್, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್, ಮಾನ್ಯ ಗೌಡ, ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ವಿಜಯ ಪ್ರಸಾದ್, ಚತುರ್ಥಿರಾಜ್, ಗೌರವ್ ಸೇರಿದಂತೆ ಹಲವರ ತಾರಾ ಬಳಗವಿದೆ ಪಿಪಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ರಮ್ಯಾ ನಿರ್ಮಾಣ ಮಾಡಿದ್ದು, ನಕುಲ್ ಅಭ್ಯಂಕರ್ ಸಂಗೀತ ಸಂಯೋಜನೆ ನೀಡಿದ್ದಾರೆ. ರಂಜನ್ ನರಸಿಂಹಮೂರ್ತಿ ಮತ್ತು ಅಮರ್ ಗೌಡ ಸಂಕಲನ, ಮನೋಹರ್ ಜೋಶಿ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular