ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್: ಶತಕದ ಸಮೀಪಕ್ಕೆ ಟೊಮೆಟೊ ದರ: ಗ್ರಾಹಕರು ಕಂಗಾಲು

ಎರಡು ವರ್ಷದ ಹಿಂದೆ 100 ರೂಪಾಯಿ ಗಡಿ ದಾಟಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದ್ದ ಟೊಮೆಟೊ ದರ ಈಗ ಮತ್ತೆ ಶತಕ ದಾಟುವ ಸಾಧ್ಯತೆ ಇದೆ.

ಕಳೆದ ಎಂಟು ಹತ್ತು ದಿನಗಳಿಂದ ಟೊಮೆಟೊ ದರ ಏರುಗತಿಯಲ್ಲಿ ಸಾಗುತ್ತಿದೆ. ಉತ್ತಮ ದರ್ಜೆಯ ಟೊಮೆಟೊ ಮಾರುಕಟ್ಟೆಗಳಲ್ಲಿ ಕೆಜಿಗೆ 80 ರೂ, 90 ರೂ.ಗೆ ಮಾರಾಟವಾಗುತ್ತಿದೆ. ಇಳುವರಿ ಕುಸಿತದಿಂದ ಮಾರುಕಟ್ಟೆಗೆ ಬರುವ ಟೊಮೆಟೊ ಪ್ರಮಾಣ ಕಡಿಮೆಯಾಗಿರುವುದರಿಂದ ದರ ಹೆಚ್ಚಳವಾಗಿದ್ದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

14 ಕೆಜಿ ಟೊಮೆಟೊ ಬಾಕ್ಸ್ ತರ 500 ರೂ ನಿಂದ 1,500 ಗೆ ಹರಾಜು ಆಗಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಪ್ರತಿದಿನ ಒಂದು ಲಕ್ಷ ಕ್ರೇಟ್, ಚಿಕ್ಕಬಳ್ಳಾಪುರ ಮಾರುಕಟ್ಟೆಗೆ 800 ರಿಂದ 1000 ಕ್ರೇಟ್ ಟೊಮೆಟೊ ಮಾರಾಟಕ್ಕೆ ಬರುತ್ತದೆ. ಉತ್ತಮ ಹೈಬ್ರಿಡ್ ಸಾಹು ಟೊಮೆಟೊ 15 ಕೆಜಿ ಬಾಕ್ಸ್ ಗೆ 1,500 ರೂ.ವರೆಗೂ ಮಾರಾಟವಾಗಿದೆ. ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ಟೊಮೆಟೊ ದರ 14 ಕೆಜಿ ಬಾಕ್ಸ್ 500 ರಿಂದ 1100 ರೂ.ವರೆಗೂ ಮಾರಾಟವಾಗಿದೆ.

ಕಳೆದ ಎರಡು ವಾರದ ಹಿಂದೆ ಕೆಜಿಗೆ 15 ರಿಂದ 20 ರೂಪಾಯಿ ಇದ್ದ ಟೊಮೆಟೊ ದರ ಈಗ 50 ರಿಂದ 90 ರೂಪಾಯಿವರೆಗೆ ಏರಿಕೆಯಾಗಿದೆ. ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read