ಬೆಂಗಳೂರು : ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರವೇ ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳವಾಗುವ ಸಾಧ್ಯತೆಯಿದೆ.
ದಿನನಿತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರವೇ ‘ನಮ್ಮ ಮೆಟ್ರೋ’ ರೈಲಿನ ಟಿಕೆಟ್ ದರ ಹೆಚ್ಚಳವಾಗಲಿದೆ ಎಂದು ತಿಳಿದು ಬಂದಿದೆ. ರೈಲ್ವೇ ನಿಲ್ದಾಣದಲ್ಲಿ ಪ್ಲಾಟ್ ಫಾರಂ ಸ್ಕ್ರೀನ್ ಅಳವಡಿಸಲಾಗುತ್ತಿದ್ದು, ಇದಕ್ಕೆ ಹೆಚ್ಚಿನ ಹಣ ಖರ್ಚು ಆಗುತ್ತಿರುವ ಹಿನ್ನೆಲೆ ಬಿಎಂಆರ್ ಸಿ ಎಲ್ ಟಿಕೆಟ್ ದರ ಏರಿಕೆ ಮಾಡಲು ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಅಭಿಪ್ರಾಯ ಕೇಳಿದ ನಮ್ಮ ಮೆಟ್ರೋ
. ನಮ್ಮ ಮೆಟ್ರೋ ಟಿಕೆಟ್ ದರ ಏರಿಸಲು ಬಿಎಂಅರ್ ಸಿಎಲ್ ಮುಂದಾಗಿದ್ದು, ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಕೋರಿದೆ. ನಾಗರಿಕರು ತಮ್ಮ ಅಭಿಪ್ರಾಯವನ್ನು ಹಾಗೂ ಸಲಹೆಗಳನ್ನು ಇ-ಮೇಲ್ ಮಾಡಬಹುದು [email protected]ಗೆ ಇಮೇ ಕಳುಹಿಸಬಹುದು. ಅಥವಾ 3ನೇ ಮಹಡಿ, ಸಿ ಬ್ಲಾಕ್ ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಹೆಚ್ ರಸ್ತೆ, ಶಾಂತಿನಗರ-ಬೆಂಗಳೂರು-560027ಕ್ಕೆ ಪತ್ರ ಬರೆದು ಕಳುಹಿಸಬಹುದು ಎಂದು ತಿಳಿಸಿದೆ.

