
ಸರ್ಕಾರ ಉಚಿತವಾಗಿ ಅಕ್ಕಿ ನೀಡುವ ಯೋಜನೆ ಜಾರಿ ಮಾಡಿ ಕ್ರಾಂತಿ ಮಾಡಿದೆ ಎಂದು ಅಂದುಕೊಂಡಿದೆ. ಆದ್ರೆ ಕಾಂಗ್ರೆಸ್ ಸರ್ಕಾರ ಮಾಡಬೇಕಾದ ಕೆಲಸಗಳು ಬೇಕಾದಷ್ಟಿದೆ. ಇನ್ನೂ ಹೆಚ್ಚು ಹಣ ಹಾಗೂ ಅಕ್ಕಿಯನ್ನು ಸರ್ಕಾರ ನೀಡಬೇಕು, ಶ್ರೀಮಂತರ ಮೇಲೆ ತೆರಿಗೆ ಹಾಕಬೇಕು ಎಂದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಬೇಕಾದ ಕೆಲಸಗಳು ಇನ್ನೂ, ಬಹಳಷ್ಟಿದೆ. ಅದಕ್ಕೆ ಸರ್ಕಾರ ಆದ್ಯತೆ ನೀಡಬೇಕು. ಶ್ರೀಮಂತರಿಗೆ ಹೆಚ್ಚಿನ ತೆರಿಗೆಯನ್ನು ಹಾಕಿ ಅದನ್ನು ಬಡವರಿಗೆ ನೀಡಬೇಕು ಎಂದರು.

