ಬೆಂಗಳೂರು: ರಸ್ತೆಗುಂಡಿ ತಪ್ಪಿಸಲು ಹೋಗಿ ಜಲ್ಲಿಕಲ್ಲು ತುಂಬಿದ್ದ ಲಾರಿಯೊಂದು ಕೆರೆಗೆ ಬಿದ್ದಿದ್ದು, ಚಾಲಕ ನಾಪತ್ತೆಯಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ.
ಆನೇಕಲ್ ನ ಬಿದರಗುಪ್ಪೆ ಕೆರೆಯಲ್ಲಿ ಈ ಘಟನೆ ನಡೆದಿದೆ. ಚಾಲಕ ಕೆರೆಯಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಚಾಲಕ ಕಲಬುರಗಿ ಮೂಲದ ಮಹೇಶ್ (37) ಎಂದು ತಿಳಿದುಬಂದಿದೆ.
ಜಲ್ಲಿಕಲ್ಲು ತುಂಬಿದ್ದ 12 ಚಕ್ರದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ. ಘಟನಾಸ್ಥಳಕ್ಕೆ ಪೊಲೀಸರು, ಮುಳುಗು ತಜ್ಞರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಕ್ರೇನ್ ಬಳಸಿ ಲಾರಿ ಮೇಲಕೆತ್ತಲು ಯತ್ನಿಸಲಾಗುತ್ತಿದೆ.
