HomeLatest Newsಕಲುಷಿತ ಹಾಲು ಸೇವನೆ: ಸಾವಿನ ಸಂಖ್ಯೆ 13ಕ್ಕೆ ಏರಿಕೆ

ಕಲುಷಿತ ಹಾಲು ಸೇವನೆ: ಸಾವಿನ ಸಂಖ್ಯೆ 13ಕ್ಕೆ ಏರಿಕೆ

ಹೈದರಾಬಾದ್: ಕಲುಷಿತ ಹಾಲು ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿರುವ ಘಟನೆ ಆಂಧ್ರಪ್ರದೇಶದ ಈಶಾನ್ಯ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ಕಲುಷಿತ ಹಾಲು ಸ್ರ‍ೇವಿಸಿ 13 ಜನರು ಮೃತಪಟ್ಟಿದ್ದು, ಏಳು ಜನರ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥರನ್ನು ರಾಜಮಹೇಂದ್ರವರಂ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಲುಷಿತ ಹಾಲು ಸೇವಿಸಿದವರಲ್ಲಿ ಮೂತ್ರ ಕಟ್ಟುವಿಕೆ, ವಾಂತಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ಡಯಾಲಿಸ್ ಅಗತ್ಯವಿರುವ ಸ್ಥಳೀಯ ನಿವಾಸಿಗಳನ್ನು ಫೆ.27ರಂದು ಆಸ್ಪತ್ರೆಗೆ ದಾಖಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಾಲಚೆರುವಿನ ಚೌಡೇಶ್ವರಿ ನಗರ ಹಾಗೂ ಸ್ವರೂಪ್ ನಗರ ಪ್ರದೇಶಗಳಲ್ಲಿ ಕಲಬೆರಿಕೆ ಮಾಡಿ ಪೂರೈಸಲಾಗಿದ್ದ ಹಾಲನ್ನು ಸೇವಿಸಿದ ಬಳಿಕ ಅಲ್ಲಿನ ಜನರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಘಟನೆ ಬೆನ್ನಲ್ಲೇ ಆಹಾರ ಸುರಕ್ಷತಾ ಅಧಿಕಾರಿಗಳು ಹಾಲಿನ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಲು, ತುಪ್ಪ, ಪನ್ನೀರ್, ನೀರು, ವಿನಿಗರ್ ಮಾದರಿಗಳ ಮೇಲೆ ನಿಗಾ ವಹಿಸುವಂತೆ ಸೂಚಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular