HomeInternationalBIG NEWS : ಅಮೆರಿಕ ವಿವಿಯಲ್ಲಿ ನಾಪತ್ತೆಯಾಗಿದ್ದ ‘ಭಾರತೀಯ ವಿದ್ಯಾರ್ಥಿ’ ಶವವಾಗಿ ಪತ್ತೆ

BIG NEWS : ಅಮೆರಿಕ ವಿವಿಯಲ್ಲಿ ನಾಪತ್ತೆಯಾಗಿದ್ದ ‘ಭಾರತೀಯ ವಿದ್ಯಾರ್ಥಿ’ ಶವವಾಗಿ ಪತ್ತೆ

ನವದೆಹಲಿ : ಅಮೆರಿಕದ ಇಂಡಿಯಾನಾ ರಾಜ್ಯದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿ ನೀಲ್ ಆಚಾರ್ಯ ಶವವಾಗಿ ಪತ್ತೆಯಾಗಿದ್ದಾರೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಪರ್ಡ್ಯೂ ವಿಶ್ವವಿದ್ಯಾಲಯದ ಜಾನ್ ಮಾರ್ಟಿನ್ಸನ್ ಹಾನರ್ಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಡೇಟಾ ಸೈನ್ಸ್ನಲ್ಲಿ ಡಬಲ್ ಮೇಜರ್ ಆಗಿರುವ ಆಚಾರ್ಯ ಭಾನುವಾರ ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು, ಇದೀಗ ಅವರ ಶವ ಪತ್ತೆಯಾಗಿದೆ.

ಇದಕ್ಕೂ ಮುನ್ನ ಸೋಮವಾರ, ಆಚಾರ್ಯ ಅವರ ತಾಯಿ ಗೌರಿ ಆಚಾರ್ಯ ಅವರು ಎಕ್ಸ್ ನಲ್ಲಿ ಪೋಸ್ಟ್ ನಲ್ಲಿ ಜನವರಿ 28 ರಿಂದ ಕಾಣೆಯಾದ ತನ್ನ ಮಗನನ್ನು ಹುಡುಕಲು ಸಹಾಯ ಕೋರಿದ್ದರು.”ನಮ್ಮ ಮಗ ನೀಲ್ ಆಚಾರ್ಯ ಜನವರಿ 28 ರಿಂದ ಕಾಣೆಯಾಗಿದ್ದಾನೆ , ಅವನು ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾನೆ. ನಾವು ಅವನನ್ನು ಹುಡುಕುತ್ತಿದ್ದೇವೆ. ನಿಮಗೆ ಏನಾದರೂ ತಿಳಿದಿದ್ದರೆ ದಯವಿಟ್ಟು ನಮಗೆ ಸಹಾಯ ಮಾಡಿ” ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular