HomeEntertainment‘ಚಿಲ್ಲಿ ಚಿಕನ್’ ಚಿತ್ರದ ಎಮೋಷನಲ್ ಹಾಡು ರಿಲೀಸ್

‘ಚಿಲ್ಲಿ ಚಿಕನ್’ ಚಿತ್ರದ ಎಮೋಷನಲ್ ಹಾಡು ರಿಲೀಸ್

ಜೂನ್ 21ರಂದು ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ‘ಚಿಲ್ಲಿ ಚಿಕನ್’ ಚಿತ್ರದ ‘ಈ ಬದುಕು’ ಎಂಬ ಎಮೋಷನಲ್ ಹಾಡನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸಿದ್ದಾರ್ಥ್ ಸುಂದರ್ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಮಾರ್ಟಿನ್ ಯೋ ಅವರ ಸಾಹಿತ್ಯವಿದೆ.

ಪ್ರತೀಕ್ ಪ್ರಜೋಶ್ ನಿರ್ದೇಶನದ ಈ ಚಿತ್ರವನ್ನು ಮೆಟನೋಯಾ ಸ್ಟುಡಿಯೋಸ್ ಬ್ಯಾನರ್ ನಡಿ ದೀಪ್ ಭೀಮ್ ಜಿಯಾನಿ ಮತ್ತು ಸುಧಾ ನಂಬಿಯಾರ್ ನಿರ್ಮಾಣ ಮಾಡಿದ್ದು, ಬಿ.ವಿ. ಶ್ರುಂಗಾ ಸೇರಿದಂತೆ  ಹರಿಣಿ ಸುಂದರರಾಜನ್, ವಿಕ್ಟರ್ ತೌಡಂ, ನಿತ್ಯಶ್ರೀ, ಪದ್ಮಜಾ ರಾವ್,ಬಿಜೌ ತಂಗ್ಜಮ್, ಜಿಂಪಾ ಸಾಂಗ್ಪೋ, ಬಣ್ಣ ಹಚ್ಚಿದ್ದಾರೆ. ಶ್ರೀಶ್ ಅವರ  ಛಾಯಾಗ್ರಹಣ, ತ್ರಿಲೋಕ ತ್ರಿವಿಕ್ರಮ ಅವರ ಸಂಭಾಷಣೆ, ಆಶಿಶ್ ಕುಸುಗೋಳಿ ಸಂಕಲನವಿದೆ.

For Latest News Updates, Join Our Whatsapp Community🚩
RELATED ARTICLES

Most Popular