HomeKarnatakaBREAKING : ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ, ಕಲಬುರಗಿಯಲ್ಲಿ ತಪ್ಪಿದ ಭಾರಿ ದುರಂತ.!

BREAKING : ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ, ಕಲಬುರಗಿಯಲ್ಲಿ ತಪ್ಪಿದ ಭಾರಿ ದುರಂತ.!

ಕಲಬುರಗಿ : ಪೆಟ್ರೋಲ್ ಸುರಿದು ಇಡೀ ಕುಟುಂಬವನ್ನು ಸಾಮೂಹಿಕವಾಗಿ ಕೊಲ್ಲಲು ಯತ್ನಿಸಿದ ಘಟನೆ ಕಲಬುರಗಿಯ ಕಡಣಿ ಗ್ರಾಮದಲ್ಲಿ ನಡೆದಿದೆ.

ಗುಂಡೇರಾವ್ ಎಂಬುವವರ ಕುಟುಂಬದ ಮೇಲಿನ ದ್ವೇಷಕ್ಕೆ ಶಿವಲಿಂಗಪ್ಪ ಎಂಬಾತ ಈ ಕೃತ್ಯ ಎಸಗಿದ್ದಾನೆ.
ಶಿವಲಿಂಗಪ್ಪ ಗುಂಡೇರಾವ್ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಭಯದಿಂದ ಗುಂಡೇರಾವ್ ಕುಟುಂಬದವರು ಮನೆಯ ಬಾಗಿಲು ಬಂದ್ ಮಾಡಿದ್ದಾರೆ. ಕೂಡಲೇ ಗ್ರಾಮದ ಜನ ಬಾಗಿಲು ಒಡೆದು ಎಲ್ಲರನ್ನೂ ಕಾಪಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜಮೀನು ವ್ಯಾಜ್ಯ ವಿವಾದಕ್ಕೆ ಸಂಬಂಧಿಸಿದಂತೆ ಇಡೀ ಕುಟುಂಬದ ಮೇಲೆ ಕೊಲೆ ಯತ್ನ ನಡೆದಿದೆ. 4 ಎಕರೆ ಜಮೀನು ಮಾರಾಟ ವಿಚಾರಕ್ಕೆ ಗಲಾಟೆ ನಡೆದಿದೆ.

ಶಿವಲಿಂಗಪ್ಪ ಎಂಬುವವರು 4 ಎಕರೆ ಜಮೀನನನ್ನು ಗುಂಡೇರಾವ್’ಗೆ ಮಾರಾಟ ಮಾಡಿದ್ದರು. ಜಮೀನು ನೋಂದಣಿ ವಿಚಾರಕ್ಕೆ ಇಬ್ಬರ ನಡುವಿನ ಗಲಾಟೆ ಇಂತಹ ದುರಂತಕ್ಕೆ ಸಾಕ್ಷಿಯಾಗಿದೆ.ಘಟನೆಯಲ್ಲಿ ಗಾಯಗೊಂಡ 6 ಮಂದಿಗೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular