ಅಮೃತಸರ: ಸಿಖ್ ರ ಪವಿತ್ರ ಸ್ಥಳ ಅಮೃತಸರದ ಸ್ವರ್ಣಮಂದಿರದ ಆವರಣದಲ್ಲಿರುವ ಕೊಳದಲ್ಲಿ ಯುವಕನೊಮ್ಮ ಕೈ-ಕಾಲು, ಮುಖ ತೊಳೆದಿದಲ್ಲದೇ ಕೊಳದ ನೀರಿನಲ್ಲಿ ಬಾಯಿ ತೊಳೆದು ಉಗುಳಿರುವ ಘಟನೆ ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿಯೂ ಯುವಕನ ವಿಡಿಯೋ ವೈರಲ್ ಆಗಿದ್ದು, ಇದನ್ನು ತೀವ್ರವಾಗಿ ಖಂಡಿಸಿರುವ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್ ಜಿ ಪಿ ಸಿ) , ಇದು ಸಿಖ್ ನೀತಿ ಸಂಹಿತೆಯ ಉಲ್ಲಂಘನೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸ್ವರಣಮಂದಿರದ ಆವರಣದಲ್ಲಿರುವ ಕೊಳದ ನೀರಿನಲ್ಲಿ ಯುವಕ ಮುಖ ತೊಳೆದು ಉಗುಳಿದ್ದಾನೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಎಸ್ ಜಿ ಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಅಲ್ಲದೇ ದೇವಾಲಯದ ಆವರಣದಲ್ಲಿ ಸಿಖ್ ಧಾರ್ಮಿಕ ನೀತಿ ಸಂಹಿತೆಯನ್ನು ಗೌರವಿಸಬೇಕು ಎಂದು ಮನವಿ ಮಾಡಿದ್ದಾರೆ.
ಎಲ್ಲಾ ಧರ್ಮಗಳ ಧಾರ್ಮಿಕ ನೀತಿಗಳನ್ನು ಗೌರವಿಸಬೇಕು. ಈ ರೀತಿ ಘಟನೆಗಳು ಇತರ ಸಮುದಾಯಗಳ ನಂಭಿಕೆ ಹಾಗೂ ಭಾವನೆಗಳಿಗೆ ನೋವುಂಟು ಮಾಡುತ್ತವೆ ಎಂದು ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.
ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಯುವಕ, ದೇವಾಲಯ ಪಾವಿತ್ರ್ಯತೆ ಹಾಳು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ನಾನು ದೇವಾಲಯಕ್ಕೆ ಭಕ್ತಿಯಿಂದಲೇ ಭೇಟಿ ನೀಡಿದ್ದೇ. ಈ ವೇಳೆ ತನ್ನಿಂದ ತಪ್ಪಾಗಿದೆ. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಅಲ್ಲದೇ ಕ್ಷಂಣೆಯಾಚಿಸಲು ತಾನು ಮತ್ತೊಮ್ಮೆ ಅಲ್ಲಿಗೆ ಭೇಟಿ ನೀಡುವುದಾಗಿ ತಿಳಿಸಿದ್ದಾನೆ.

