HomeEntertainmentಟ್ರಾಫಿಕ್​ ಕಿರಿಕಿರಿ ತಪ್ಪಿಸಲು ಅಪರಿಚಿತನ ಬೈಕ್​ ಏರಿ ಅಮಿತಾಭ್​ ಸವಾರಿ

ಟ್ರಾಫಿಕ್​ ಕಿರಿಕಿರಿ ತಪ್ಪಿಸಲು ಅಪರಿಚಿತನ ಬೈಕ್​ ಏರಿ ಅಮಿತಾಭ್​ ಸವಾರಿ

ಮುಂಬೈ: ಬಾಲಿವುಡ್​ ತಾರೆ ಅಮಿತಾಭ್​ ಬಚ್ಚನ್ ಅವರು ಅಪರಿಚಿತನ ಬೈಕ್ ಏರಿ ಹೋದ ಘಟನೆ ಮುಂಬೈನಲ್ಲಿ ನಡೆದಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಇವರು ಅಪರಿಚಿತನ ಬೈಕ್ ಏರಿ ಹೋಗಿದ್ದಾರೆ ಎನ್ನಲಾಗಿದೆ.

ಸರಿಯಾದ ಸಮಯಕ್ಕೆ ಶೂಟಿಂಗ್ ಸ್ಪಾಟ್​ಗೆ ಹೋಗಲು ಅವರು ಬೈಕ್​ ಏರಿದ್ದಾರೆ. ಈ ಕುರಿತು ಖುದ್ದು ಅವರೇ ವಿಷಯ ತಿಳಿಸಿದ್ದಾರೆ. ಈ ಪೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಬಿಗ್​ ಬಿ, ಅಪರಿಚಿತ ವ್ಯಕ್ತಿಗೆ ಧನ್ಯವಾದ ಸಲ್ಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೀವ್ಯಾರೊ ಗೊತ್ತಿಲ್ಲ. ನೀವು ನನ್ನನ್ನು ಸರಿಯಾದ ಸಮಯಕ್ಕೆ ಶೂಟಿಂಗ್ ಸ್ಥಳಕ್ಕೆ ತಲುಪಿಸಿದ್ದೀರಿ. ಸಂಚಾರ ದಟ್ಟಣೆ ನಡುವೆಯೂ ನೀವು ವೇಗವಾಗಿ ಬೈಕ್ ಓಡಿಸಿ ನನ್ನನ್ನು ಸರಿಯಾದ ವೇಳೆಗೆ ತಲುಪುವಂತೆ ಮಾಡಿದ್ದೀರಿ. ಯೆಲ್ಲೊ ಶರ್ಟ್, ಶಾರ್ಟ್ ಮತ್ತು ಟೋಪಿ ಹಾಕಿಕೊಂಡಿರುವ ನಿಮಗೆ ಧನ್ಯವಾದಗಳು ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಅಮಿತಾಭ್ ಬಚ್ಚನ್ ಫೋಸ್ಟ್ ಗೆ ಪ್ರತಿಕ್ರಿಯಿಸಿರುವ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ, ಹೃದಯ-ಕಣ್ಣಿನ ಎಮೋಜಿಯೊಂದಿಗೆ ಕಾಮೆಂಟ್ ಮಾಡಿದ್ದಾರೆ. ಅಮಿತಾಭ್ ಸಮಯ ಪಾಲನೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ನಟಿ ಸಯಾನಿ ಗುಪ್ತಾ ಟ್ವೀಟ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular