HomeEntertainment"ನನಗೆ ಸರ್ಜರಿ ಆಗಿಲ್ಲ, ಆ ಪೋಸ್ಟ್ ತಪ್ಪಾಗಿ ಅರ್ಥೈಸಲಾಗಿದೆ": ಆತಂಕಗೊಂಡ ಅಭಿಮಾನಿಗಳಿಗೆ ಅಮಿತಾಭ್ ಬಚ್ಚನ್ ಸ್ಪಷ್ಟನೆ

“ನನಗೆ ಸರ್ಜರಿ ಆಗಿಲ್ಲ, ಆ ಪೋಸ್ಟ್ ತಪ್ಪಾಗಿ ಅರ್ಥೈಸಲಾಗಿದೆ”: ಆತಂಕಗೊಂಡ ಅಭಿಮಾನಿಗಳಿಗೆ ಅಮಿತಾಭ್ ಬಚ್ಚನ್ ಸ್ಪಷ್ಟನೆ

ಮುಂಬೈ: ಬಾಲಿವುಡ್‌ನ ಮಹಾ ನಾಯಕ ಅಮಿತಾಭ್ ಬಚ್ಚನ್ (83) ತಮ್ಮ ಇತ್ತೀಚಿನ ಬ್ಲಾಗ್ ಪೋಸ್ಟ್‌ನಲ್ಲಿ ಆಸ್ಪತ್ರೆ ವಾಸ, ಶಸ್ತ್ರಚಿಕಿತ್ಸೆ (Surgery) ಹಾಗೂ ಐಸಿಯು (ICU) ಹಂತದ ಕುರಿತು ಬರೆದುಕೊಂಡಿದ್ದು ದೇಶಾದ್ಯಂತ ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿತ್ತು. ಆದರೆ, ತಾವು ಸಂಪೂರ್ಣವಾಗಿ ಆರೋಗ್ಯವಾಗಿದ್ದು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ ಎಂದು ಬಿಗ್‌ ಬಿ ಸ್ಪಷ್ಟಪಡಿಸಿದ್ದಾರೆ.

ಜನರು ತಮ್ಮ ಬರಹವನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ವೆರೈಟಿ ಇಂಡಿಯಾ (Variety India) ಸಂಸ್ಥೆಗೆ ನೀಡಿರುವ ವಿಶೇಷ ಸ್ಪಷ್ಟನೆಯಲ್ಲಿ ಹಿರಿಯ ನಟ ತಿಳಿಸಿದ್ದಾರೆ.

ಮೆಸ್ಸಿ ಸೋಲು ಮತ್ತು ಫೀಫಾ ಫೈನಲ್ ಹಿನ್ನೆಲೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮ್ಮ ಬ್ಲಾಗ್ ಬರಹದ ಹಿಂದಿನ ನೈಜ ಉದ್ದೇಶವನ್ನು ವಿವರಿಸಿದ ಅಮಿತಾಭ್, ಇತ್ತೀಚೆಗೆ ಮುಕ್ತಾಯಗೊಂಡ ಫೀಫಾ ವಿಶ್ವಕಪ್ (FIFA World Cup) ಫೈನಲ್ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಅರ್ಜೆಂಟೀನಾ ತಂಡ ಅನುಭವಿಸಿದ ಸೋಲು ಹಾಗೂ ಲಿಯೋನೆಲ್ ಮೆಸ್ಸಿ ಅವರ ಪರಿಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಆ ಸಾಲುಗಳನ್ನು ಬರೆದಿದ್ದಾಗಿ ಹೇಳಿದ್ದಾರೆ.

“ನಾನು ಸಂಪೂರ್ಣ ಚೆನ್ನಾಗಿದ್ದೇನೆ. ನನಗೆ ಯಾವುದೇ ಶಸ್ತ್ರಚಿಕಿತ್ಸೆ ಆಗಿಲ್ಲ. ಜನರು ಅದನ್ನು ತಪ್ಪಾಗಿ ಗ್ರಹಿಸಿದ್ದಾರೆ. ಶಸ್ತ್ರಚಿಕಿತ್ಸೆ ಅಥವಾ ಐಸಿಯುನಿಂದ ಮನೆಗೆ ಮರಳಿದಾಗ ದೇಹದ ಹಾನಿಗೊಳಗಾದ ಸ್ಥಿತಿಯನ್ನು ಎದುರಿಸುವುದು ಎಷ್ಟು ಸವಾಲೋ, ಅಂತೆಯೇ ಒಬ್ಬ ಚಾಂಪಿಯನ್ ಸೋತಾಗ ಆ ಆಘಾತದಿಂದ ಹೊರಬರುವುದು ಅತ್ಯಂತ ಕಠಿಣ ಎಂಬುದನ್ನು ವಿವರಿಸಲು ಆ ಉದಾಹರಣೆ ನೀಡಿದ್ದೆ. ಫೀಫಾ ಫೈನಲ್‌ನಲ್ಲಿ ಅರ್ಜೆಂಟೀನಾ ಸೋಲನ್ನು ಮತ್ತು ಮೆಸ್ಸಿಯನ್ನು ಸೋತ ಚಾಂಪಿಯನ್ ಎಂದು ಉಲ್ಲೇಖಿಸಿ ಬರೆದಿದ್ದೆ. ಆದರೆ ಜನರು ಅದನ್ನು ನನ್ನ ಆರೋಗ್ಯಕ್ಕೆ ಹೋಲಿಸಿಕೊಂಡಿದ್ದಾರೆ” ಎಂದು ಬಿಗ್ ಬಿ ತಿಳಿಸಿದ್ದಾರೆ.

ಬಿದ್ದ ಸ್ಥಳದಿಂದ ಎದ್ದು ನಿಲ್ಲುವುದೇ ಚಾಂಪಿಯನ್ ಗುಣ

ಚಾಂಪಿಯನ್‌ಗಳು ಹಾಗೂ ಅವರ ಜೀವನದ ಮರುಹೋರಾಟದ ಬಗ್ಗೆ ಸ್ಫೂರ್ತಿದಾಯಕವಾಗಿ ಮಾತನಾಡಿದ ಅಮಿತಾಭ್ “ಒಬ್ಬ ಚಾಂಪಿಯನ್ ತನ್ನ ಜಾಗಕ್ಕೆ ಮತ್ತೊಬ್ಬರು ಬರುವುದನ್ನು ಒಪ್ಪಿಕೊಳ್ಳುವುದು ಕಷ್ಟವಾದರೂ, ಜೀವನದ ಸತ್ಯವೇ ಅದು. ವೈದ್ಯಕೀಯ ಚಿಕಿತ್ಸೆಯು ಕಾಯಿಲೆಯನ್ನು ಗುಣಪಡಿಸಬಹುದು, ಆದರೆ ಚಿಕಿತ್ಸೆಯ ನಂತರ ದೇಹದಲ್ಲಿ ಆಗುವ ಬದಲಾವಣೆಗಳಿಗೆ ಹೊಂದಿಕೊಳ್ಳುವುದೇ ನಿಜವಾದ ಸವಾಲು. ನಮ್ಮ ದೇಹವು ಅದ್ಭುತ ಶಕ್ತಿಯನ್ನು ಹೊಂದಿದೆ. ಮೊದಲಿಗಿಂತ ಭಿನ್ನವಾಗಿದ್ದರೂ, ಪ್ರಯತ್ನಿಸಿದರೆ ದೇಹವು ಫಲಿತಾಂಶ ನೀಡುತ್ತದೆ ಬಿದ್ದ ಸ್ಥಳದಿಂದ ಎದ್ದು ನಿಂತು, ಮತ್ತೆ ಚಾಂಪಿಯನ್ ಆಗಿ ಹೋರಾಡುವ ಶಕ್ತಿ ಚಾಂಪಿಯನ್‌ಗೆ ಇದ್ದೇ ಇರುತ್ತದೆ” ಎಂದಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular