ಒತ್ತಡ ನಿವಾರಣೆ ಜೊತೆಗೆ ಹತ್ತಾರು ಕಾಯಿಲೆಗಳನ್ನೂ ನಿವಾರಿಸುತ್ತೆ ಕುಟುಂಬದೊಂದಿಗಿನ ಭೋಜನ !

ಆಧುನಿಕ ಜೀವನ ಶೈಲಿಯಲ್ಲಿ ಒತ್ತಡ ಸಾಮಾನ್ಯ ಸಮಸ್ಯೆ. ಕೆಲಸದ ಒತ್ತಡ, ಆರ್ಥಿಕ ಸಮಸ್ಯೆಗಳು, ಕೌಟುಂಬಿಕ ಮತ್ತು ಸಂಬಂಧದಲ್ಲಿ ಸಮಸ್ಯೆ, ವೈಯಕ್ತಿಕ ಸಮಸ್ಯೆ ಹೀಗೆ ಒತ್ತಡಕ್ಕೆ ಹಲವು ಕಾರಣಗಳಿರಬಹುದು. ಒತ್ತಡವನ್ನು ನಿವಾರಿಸಲು ಸುಲಭದ ವಿಧಾನವಿದೆ. ಇದನ್ನು ಅನುಸರಿಸಿದ್ರೆ ಒತ್ತಡ ಮುಕ್ತರಾಗಬಹುದು. ಕುಟುಂಬ ಸಮೇತ ಆಹಾರ ಸೇವಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಕುಟುಂಬದವರೊಂದಿಗೆ ಆಹಾರ ಸೇವಿಸುವುದರಿಂದ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ​​ನಡೆಸಿದ ಸಮೀಕ್ಷೆ ಹೇಳಿದೆ. ಸಾವಿರಕ್ಕೂ ಹೆಚ್ಚು ವಯಸ್ಕರು ತಮ್ಮ ಕುಟುಂಬದೊಂದಿಗೆ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ತಮ್ಮ ಕುಟುಂಬದೊಂದಿಗೆ ಆಹಾರವನ್ನು ಸೇವಿಸುವ ಅಥವಾ ಪ್ರತಿದಿನ 15 ರಿಂದ 20 ನಿಮಿಷಗಳ ಕಾಲ ಅವರೊಂದಿಗೆ ಸಮಯ ಕಳೆಯುವ ಜನರು ಕಡಿಮೆ ಒತ್ತಡವನ್ನು ಹೊಂದಿರುತ್ತಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.

ಪೋಷಕರೊಂದಿಗೆ ಭೋಜನ

ಪೋಷಕರ ಜೊತೆಗೂಡಿ ಆಹಾರವನ್ನು ಸೇವಿಸುವುದರಿಂದ ಕುಟುಂಬಸ್ಥರಲ್ಲಿ ಮಾನಸಿಕ ಒತ್ತಡ ಶೇ.91ರಷ್ಟು ಕಡಿಮೆಯಾಗುತ್ತದೆ. ಶೇ.84 ರಷ್ಟು ಜನರು ಒತ್ತಡವನ್ನು ತಪ್ಪಿಸಲು ತಮ್ಮ ಕುಟುಂಬದೊಂದಿಗೆ ಪ್ರತಿದಿನ ಸಮಯ ಕಳೆಯಲು ಬಯಸುತ್ತಾರೆ.

ಸಮೀಕ್ಷೆ ಏನು ಹೇಳುತ್ತದೆ ?

ಇತ್ತೀಚಿನ ದಿನಗಳಲ್ಲಿ ಕೆಲಸದ ಹೊರೆಯಿಂದಾಗಿ ಜನರಿಗೆ  ಕುಟುಂಬಸ್ಥರೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಕೆಲವರು ಕೆಲಸದ ನಿಮಿತ್ತ ಕುಟುಂಬದಿಂದ ದೂರ ಉಳಿಯಬೇಕಾಗಿ ಬರುತ್ತದೆ. ಕೆಲವರು ಒಟ್ಟಿಗೆ ವಾಸಿಸುತ್ತಿದ್ದರೂ ಅವರೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ಒಂಟಿತನಕ್ಕೆ ಬಲಿಯಾಗುತ್ತಾರೆ. ಈ ಒಂಟಿತನವು ಕ್ರಮೇಣ ಅವರನ್ನು ಒತ್ತಡ ಮತ್ತು ಖಿನ್ನತೆಗೆ  ಕರೆದೊಯ್ಯುತ್ತದೆ. ಈ ಉದ್ವಿಗ್ನತೆಯು ಕುಟುಂಬದಲ್ಲಿ ಭಿನ್ನಾಭಿಪ್ರಾಯವನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ಕುಟುಂಬದೊಂದಿಗೆ ಪ್ರತಿದಿನ ಕನಿಷ್ಠ 15 ನಿಮಿಷಗಳನ್ನಾದರೂ ಕಳೆಯಬೇಕು.

ಸಾಮಾಜಿಕ ಸಂಬಂಧಗಳನ್ನು ಸುಧಾರಿಸಿ

ಎಲ್ಲರೊಟ್ಟಿಗೆ ಆಹಾರ ಸೇವಿಸುವುದರಿಂದ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಸ್ವಾಭಿಮಾನವನ್ನು ಹೆಚ್ಚಿಸಿಕೊಳ್ಳಬಹುದು. ಸಾಮಾಜಿಕ ಬಂಧವನ್ನು ಸುಧಾರಿಸಲು, ವಿಶೇಷವಾಗಿ ಮಕ್ಕಳಿಗೆ ಇದು ಉತ್ತಮ ಮಾರ್ಗವಾಗಿದೆ. ಸ್ನೇಹಿತರು, ಕುಟುಂಬ, ಸಹೋದ್ಯೋಗಿಗಳು ಮತ್ತು ನೆರೆಹೊರೆಯವರೊಂದಿಗೆ ಸಂಪರ್ಕ ಸಾಧಿಸುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಒಟ್ಟಿಗೆ ತಿನ್ನುವುದರಿಂದ ಇತರ ಜನರೊಂದಿಗೆ ಸಂಪರ್ಕ ಸಾಧಿಸುವ ಮಹತ್ವದ ಬಗ್ಗೆ ಶೇ.67 ರಷ್ಟು ಜನರಲ್ಲಿ ಅರಿವು ಮೂಡುತ್ತದೆ ಎಂಬುದು ಕೂಡ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಹೃದಯ ಕಾಯಿಲೆಯ ಅಪಾಯ

ದೀರ್ಘಕಾಲ ಒತ್ತಡದಲ್ಲಿರುವವರಿಗೆ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚು. ಒತ್ತಡವು ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ, ಇದು ಹೃದ್ರೋಗಕ್ಕೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಒತ್ತಡವನ್ನು ದೀರ್ಘಕಾಲದವರೆಗೆ ನಿರ್ಬಂಧಿಸದಿದ್ದರೆ, ಗಂಭೀರ ಸಂದರ್ಭಗಳಲ್ಲಿ ಇದು ಹೃದಯಾಘಾತದಂತಹ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಹಾಗಾಗಿ ಕುಟುಂಬಸ್ಥರೊಂದಿಗಿನ ಭೋಜನ ಮತ್ತು ಉಪಹಾರ ಸೇವನೆ ಹೃದಯದ ಆರೋಗ್ಯಕ್ಕೂ ಅಗತ್ಯವಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read