HomeLatest Newsಸಾಂಬಾರ್ ವಿಚಾರವಾಗಿ ಪತಿ-ಪತ್ನಿ ನಡುವೆ ಜಗಳ: ಮನನೊಂದ ಮಹಿಳೆ ಸಾವಿಗೆ ಶರಣು!

ಸಾಂಬಾರ್ ವಿಚಾರವಾಗಿ ಪತಿ-ಪತ್ನಿ ನಡುವೆ ಜಗಳ: ಮನನೊಂದ ಮಹಿಳೆ ಸಾವಿಗೆ ಶರಣು!

ಬೆಂಗಳೂರು: ಸಾಂಬಾರ್ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳವಾಗಿ ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳಳ್ಳಿಯಲ್ಲಿ ನಡೆದಿದೆ.

ಸಾವಕನಹಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ನಾಗರತ್ನ (38) ಮೃತ ಮಹಿಳೆ. ನೇಣು ಬಿಗಿದ ಸ್ಥಿತಿಯಲ್ಲಿ ನಾಗರತ್ನ ಶವ ಪತ್ತೆಯಾಗಿದೆ. ಮಗಳನ್ನು ಹತ್ಯೆಗೈದು ಆತ್ಮಹತ್ಯೆ ಎಂದು ಅಳಿಯ ಕಥೆ ಕಟ್ಟುತ್ತಿದ್ದಾನೆ ಎಂದು ನಾಗರತ್ನ ಪೋಷಕರು ಆರೋಪಿಸಿದ್ದಾರೆ.

ಆದರೆ ಸಾಂಬಾರ್ ವಿಚಾರವಾಗಿ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ನಾಗರತ್ನ ಪತಿ ಹೇಳಿಕೆ ನೀಡಿದ್ದಾರೆ. ನಾಗರತ್ನಾ ಪೋಷಕರು ಇದು ಕೊಲೆ ಎಂದು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular