HomeLatest NewsBREAKING : ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ : ಜಿಲ್ಲಾಧಿಕಾರಿ, CEO ಗಳಿಗೆ 'CM...

BREAKING : ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ : ಜಿಲ್ಲಾಧಿಕಾರಿ, CEO ಗಳಿಗೆ ‘CM ಸಿದ್ದರಾಮಯ್ಯ’ ನೀಡಿದ ಸೂಚನೆಗಳು ಹೀಗಿದೆ.!

ಬೆಂಗಳೂರು : ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿ ಹಾಗೂ ಸಿಇಒಗಳಿಗೆ ಸೂಚನೆ ನೀಡಿದ್ದಾರೆ.

CM ಸಿದ್ದರಾಮಯ್ಯ’ ನೀಡಿದ ಸೂಚನೆಗಳು ಹೀಗಿದೆ.!

ಎಲ್ಲೆಲ್ಲಿ ಬಾಟಲ್ ನೆಕ್ ಸಮಸ್ಯೆ ಇದೆ ಅವುಗಳನ್ನು ಮೊದಲ ಆದ್ಯತೆ ನೀಡಿ ಬಗೆಹರಿಸಬೇಕು. ಎಸ್ಎಲ್ಎಒ ಗಳು ಜಿಲ್ಲಾಧಿಕಾರಿಗಳ ಅಧೀನದಲ್ಲಿ ಬರುವಂತೆ ಒಂದು ಸುತ್ತೋಲೆ ಹೊರಡಿಸುವಂತೆ ಸೂಚಿಸಿದರು. ಮೇಲಿಂದ ಮೇಲೆ ಪರಿಶೀಲನೆ ನಡೆಸುತ್ತಿದ್ದರೆ ಪರಿಸ್ಥಿತಿ ಸುಧಾರಿಸಬಹುದು ಎಂದು ಸಚಿವ ಕೃಷ್ಣಬೈರೇಗೌಡರು ಸೂಚನೆ ನೀಡಿದರು.
ಎಸ್ಎಲ್ಎಒ ಗಳ ಪ್ರಾಕ್ಟಿಸ್ ಅಷ್ಟು ಸರಿ ಇಲ್ಲ. ಮಾರುಕಟ್ಟೆ ಬೆಲೆ, ಗೈಡೆನ್ಸ್ ಬೆಲೆಗೂ ಇವರು ತರುವ ಬೆಲೆಗೂ ಯದ್ವಾತದ್ವಾ ವ್ಯತ್ಯಾಸ ಇರುತ್ತದೆ. ಇದು ಸರ್ಕಾರದ ಮೇಲೆ ಅನಗತ್ಯ ಹೊರೆ ಬೀಳುತ್ತದೆ. ಇದರಲ್ಲಿ ಎಸ್ಎಲ್ಎಒ ಗಳ ವರ್ತನೆಗಳು, ಪ್ರಾಕ್ಟಿಸ್ ಸರಿ ಇಲ್ಲ. ಹೀಗಾಗಿ ಇವರನ್ನು ಜಿಲ್ಲಾಧಿಕಾರಿಗಳ ಅಧೀನಕ್ಕೆ ತರುವುದು ಉತ್ತಮ ಎನ್ನುವ ಅಭಿಪ್ರಾಯವನ್ನು ಸಭೆಯಲ್ಲಿ ಸಚಿವರುಗಳು ಮತ್ತು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಖ್ಯಮಂತ್ರಿಗಳು ಈ ಬಗ್ಗೆ ಸಮಗ್ರ ಪರಿಶೀಲನೆ ಮಾಡಿ ಜಿಲ್ಲಾಧಿಕಾರಿಗಳ ಅಧೀನಕ್ಕೆ ತರುವಂತೆ ಸೂಚನೆ ನೀಡಿದರು.ಅನರ್ಹ ಪಡಿತರ ಚೀಟಿದಾರರ ಸಂಖ್ಯೆ ವಿಪರೀತ ಹೆಚ್ಚುತ್ತಿರುವುದಕ್ಕೆ ಕಾರಣ ಏನು? ವೈಜ್ಞಾನಿಕ ಅಂಕಿ ಅಂಶಗಳು ಬೇರೆಯೇ ಹೇಳುತ್ತಿವೆ. ಯಾವ ಜಿಲ್ಲೆಯಲ್ಲೂ ಶೇ. 60 ಕ್ಕಿಂತ ಹೆಚ್ಚು ಅರ್ಹರು ಇರಲು ಸಾಧ್ಯವಿಲ್ಲ. ಇದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದು. ಆದರೆ ಶೇ.80, ಶೇ.90 ಅಂತೆಲ್ಲಾ ಇದ್ದರೆ ಅದನ್ನು ಯಾವ ಮಾನದಂಡದಲ್ಲೂ ಒಪ್ಪಲು ಸಾಧ್ಯವಿಲ್ಲ. ಇದರಿಂದ ದೊಡ್ಡ ಅನ್ಯಾಯ ಆಗುವುದು ನಿಜವಾದ ಅರ್ಹರಿಗೆ ಅರ್ಹರಿಗೆ ಅನ್ಯಾಯ ಆಗುವುದನ್ನು ತಡೆಯಲು ನಕಲಿ ಮತ್ತು ಅನರ್ಹ ಕಾರ್ಡ್ಗಳನ್ನು ತಡೆಯಬೇಕು.
ಶಿಕ್ಷಕರು, ಸರ್ಕಾರಿ ನೌಕರರ ಬಳಿಯೂ ಬಿಪಿಎಲ್ ಪಡಿತರ ಚೀಟಿಗಳಿವೆ. ಇವರಲ್ಲಿ ಹಲವರು ಪಡಿತರ ಪಡೆಯುವುದಿಲ್ಲ. ಆದರೆ ಆಸ್ಪತ್ರೆಗಳಿಗೆ ಹೋಗಲು ಮತ್ತು ಇನ್ನಿತರೆ ಅಗತ್ಯಗಳಿಗೆ ಕಾರ್ಡ್ಗಳನ್ನು ಬಳಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ಸಭೆಗೆ ನೀಡಿದರು.

ಅರ್ಹರು ಯಾವುದೇ ಕಾರಣಕ್ಕೂ ತಪ್ಪಬಾರದು. ಅರ್ಹರಿಗೆ ಸವಲತ್ತು ತಪ್ಪಬಾರದು, ಸಮಸ್ಯೆ ಆಗಬಾರದು. ಆದರೆ ಅರ್ಹರಿಗೆ ಸಮಸ್ಯೆ ಆಗದಂತೆ ಅನರ್ಹ ಕಾರ್ಡ್ ಗಳನ್ನು ರದ್ದಾಗುವ ದಿಕ್ಕಿನಲ್ಲಿ ಏನೇನು ಮಾಡಬಹುದು ಎನ್ನುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಉತ್ತರ ಕೇಳಿದರು. ನಿಮ್ಮ ಪ್ರಾಯೋಗಿಕ ಅನುಭವದಲ್ಲಿ ಏನೇನು ಸಮಸ್ಯೆಗಳನ್ನು ಎದುರಿಸಿದ್ದೀರಿ, ಈ ಸಮಸ್ಯೆಗಳ ಪರಿಹಾರಕ್ಕೆ ಏನೇನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಹಿಂದುಳಿದವರು, ದಲಿತರು, ಅಶಿಕ್ಷಿತರು ಇರುವ ಕಡೆ ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿ ಪ್ರಕರಣಗಳು ಇರುತ್ತವೆ. ಇದನ್ನು ಸಮರ್ಪಕವಾಗಿ ತಡೆಯಬೇಕು ಎಂದು ನಿಮಗೆ ಅನ್ನಿಸಲ್ವಾ? ಸರಿಯಾಗಿ ನಿಗಾ ವಹಿಸಿ, ವರದಿ ನೀಡದ ಪಿಡಿಒ ಗಳು ರೆವಿನ್ಯೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಿ. ಅಗತ್ಯ ಇರುವ ಕಡೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಕಾನೂನು ಕ್ರಮ ಕೈಗೊಳ್ಳಿ ಎಂದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular