HomeLatest Newsಅಡುಗೆ ಮನೆ ಶೆಲ್ಫ್‌ ಕ್ಲೀನಿಂಗ್‌ ಗೆ ಈಸಿ ಟಿಪ್ಸ್

ಅಡುಗೆ ಮನೆ ಶೆಲ್ಫ್‌ ಕ್ಲೀನಿಂಗ್‌ ಗೆ ಈಸಿ ಟಿಪ್ಸ್

ಅಡುಗೆ ಮನೆಯ ಶೆಲ್ಫ್‌ಗಳಲ್ಲಿ ಧೂಳು, ಕೊಳಕು, ಜಿಡ್ಡು, ಎಣ್ಣೆ ಕಲೆಗಳು ಸಾಮಾನ್ಯ. ಇದನ್ನು ನಿತ್ಯವೂ ಸ್ವಚ್ಛ ಮಾಡುವುದು ಕಷ್ಟ. ಶೆಲ್ಫ್‌ಗಳನ್ನು ಸ್ವಚ್ಛ ಮಾಡಲು ಕೆಲ ವಿಧಾನ ಅನುಸರಿದರೆ ಕೆಲಸ ಸುಲಭವಾಗುತ್ತದೆ.

* ಅಡುಗೆ ಮನೆಯಲ್ಲಿ ಶೆಲ್ಫ್‌ಗಳು ಮುಖ್ಯ ಪಾತ್ರವನ್ನು ವಹಿಸುವುದರಿಂದ ಇವುಗಳ ಸ್ವಚ್ಛತೆಗೆ ಗಮನ ನೀಡಬೇಕು. ಮರದ ಶೆಲ್ಫ್‌ಗಳಾಗಿದ್ದರೆ ಪಾಲಿಶಿಂಗ್‌ ಮತ್ತು ವ್ಯಾಕ್ಸ್‌ ಮಾಡಿಸಬೇಕಾಗುತ್ತದೆ. ಬ್ಲೀಚ್‌ ಇಲ್ಲದ ಆಂಟಿ ಬ್ಯಾಕ್ಟೀರಿಯಲ್‌ ಕ್ಲೀನರ್‌ ಅನ್ನು ಬಳಸಬಹುದು.

* ಶೆಲ್ಫ್‌ಗಳಿಗೆ ಪೇಂಟ್ ಮಾಡಿದ್ದೀರಿ ಎಂದಾದಲ್ಲಿ ಬಿಳಿ ವಿನಿಗರ್‌ ಅನ್ನು ಬಳಸಿ ಧೂಳು ಮತ್ತು ಗ್ರೀಸ್‌ ಅನ್ನುತೆಗೆಯಿರಿ. ಹೆಚ್ಚು ರಾಸಾಯನಿಕವಿರುವ ಕ್ಲೀನರ್‌ಗಳನ್ನು ಬಳಸಬೇಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* 1 ಚಮಚ ಬ್ಲೀಚ್‌ಗೆ 1/4 ಭಾಗದಷ್ಟು ನೀರು ಹಾಕಿ ದ್ರಾವಣವನ್ನು ಸಿದ್ಧಪಡಿಸಿ. ಶೆಲ್ಫ್‌ಗಳ ಮೇಲ್ ಭಾಗವನ್ನು ಕ್ಲೀನರ್‌ ಸಹಾಯದಿಂದ ಸ್ವಚ್ಛಗೊಳಿಸಿ.

* ಯಾವತ್ತೂ ಶೆಲ್ಫ್‌ಗಳ ತುದಿ, ಅಂಚುಗಳಿಗೆ ಗಮನ ಕೊಡಲು ಮರೆಯದಿರಿ. ಈ ಸ್ಥಳಗಳಲ್ಲಿ ಅಡಗಿರುವ ಕೊಳೆಯನ್ನು ತೆಗೆಯಲು ಸಣ್ಣ ಬ್ರಶ್‌ ಅನ್ನು ಬಳಸಿ.

* ಶೆಲ್ಫ್‌ಗಳಲ್ಲಿರುವ ಕೊಳೆ ತುಂಬಾ ದಪ್ಪವಾಗಿದೆ ಎಂದಾದಲ್ಲಿ ಅದನ್ನು ತೆಗೆಯಲು ಬೇಕಿಂಗ್‌ ಸೋಡಾ ಮತ್ತು ನೀರಿನ ಮಿಶ್ರಣವನ್ನು ಬಳಸಿ. ಈ ಎರಡೂ ಸಾಮಾಗ್ರಿಗಳ ಪೇಸ್ಟ್‌ ಧೂಳು ಮತ್ತು ಕೊಳೆಯನ್ನು ನಿವಾರಿಸುವಲ್ಲಿ ಸಹಕಾರಿ. ಕೊಳೆಯನ್ನು ನಿವಾರಿಸಿ ಶೆಲ್ಫ್‌ಗೆ ಹೊಳಪನ್ನು ನೀಡುತ್ತದೆ.

* ಶೆಲ್ಫ್‌ಗಳ ಕೊಳೆಯನ್ನು ನಿವಾರಿಸಲು ಲಿಂಬೆ ರಸವನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಒದ್ದೆ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಕೊಳೆ ಒರೆಸಿ ನಂತರ ಲಿಂಬೆಯನ್ನು ಬಳಸಿ ಉಜ್ಜಿ.

For Latest News Updates, Join Our Whatsapp Community🚩
RELATED ARTICLES

Most Popular